( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
****
ಮನೆಗೆ ಕನ್ನ ಹಾಕಿದ ಆರೋಪದಿಂದ ಮುಕ್ತನಾದ ಅವನು ತನ್ನ ವಕೀಲರಿಗೆ ಹೇಳಿದ - ಒಳ್ಳೆಯದು, ಯಾವಾಗಲಾದರು ನಿಮ್ಮ ಮನೆಗೆ ಬರುತ್ತೇನೆ
ವಕೀಲರು ಹೇಳಿದರು - ಹಗಲು ಹೊತ್ತೇ ಬಾ.
****
ನ್ಯಾಯಾಧೀಶರು ಆರೋಪಿಗೆ ಹೇಳಿದರು - ನೀನು ಅಸಂಬದ್ಧವಾಗಿ ಸುಳ್ಳುಗಳನ್ನು ಹೇಳುತ್ತಿದ್ದೀಯ , ನೀನೇಕೆ ವಕೀಲರನ್ನು ಇಟ್ಟುಕೊಳ್ಳಬಾರದು ?
****
-ಈಗೀಗ ನನಗೆ ಮರೆವು ಕಾಡುತ್ತಿದೆ . ಅದಕ್ಕಾಗಿ ಡಾಕ್ಟರ್ ಹತ್ತಿರ ಹೋದೆ.
-ಅವರು ಏನಂದರು ?
-ಫೀಸನ್ನ ಮುಂಚಿತವಾಗಿ ಕೊಡಿ ಅಂದರು.
****
- ಡಾಕ್ಟರು ಹದಿನೈದು ದಿನಗಳಲ್ಲಿ ನಾನು ನಡೆದಾಡುವ ಹಾಗೆ ಮಾಡ್ತೀನಿ ಅಂದಿದ್ದರು .
- ಹಾಗೆಯೇ ಮಾಡಿದರು ತಾನೆ ?
- ಹೌದು , ಅವರ ಬಿಲ್ ಕೊಡಲು ನಾನು ನನ್ನ ಕಾರು ಮಾರಬೇಕಾಯಿತು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಹೊಸ ನಗೆಹನಿ- ೫೩ ನೇ ಕಂತು
ಹೊಸ ನಗೆಹನಿ- ೫೧ ನೇ ಕಂತು
ಈ ನಗೆಹನಿಗಳನ್ನ ಈಗಾಗಲೇ ಕೇಳಿದ್ದರೆ.. (50ನೇ ಕಂತು)
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!