( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ

)

****

- ನಾನು ಆಸ್ಪತ್ರೆಗೆ ಹೋಗಿದ್ದೆ, ಅವನು ಇನ್ನೂ ಬಹಳ ಧಿನ ಅಲ್ಲೇ ಇರುತ್ತಾನೆ.

-ಅಲ್ಲಿ ಡಾಕ್ಟರ್ ಅನ್ನು ಕಂಡಿರಾ ?

- ಇಲ್ಲ , ನರ್ಸನ್ನ ಕಂಡೆ !

****

ಡಾಕ್ಟರ್ - ನೀವು ಇವತ್ತೇ ಬಂದದ್ದು ಒಳ್ಳೆಯದಾಯಿತು.

ರೋಗಿ - ಯಾಕೆ , ನೀವೇನಾದರೂ ಹಣದ ತೊಂದರೆಯಲ್ಲಿದ್ರಾ ?

****

ಧರ್ಮಪ್ರಚಾರಕ ತನ್ನ ಮೇಲಿನವರಿಗೆ ಸಂದೇಶ ( ಟೆಲಿಗ್ರಾಂ ಅಂತ ಬರೆಯಬಹುದಿತ್ತು , ಆದರೆ ಅದು ಈಗ ಇತಿಹಾಸವಾಗಿದೆ ) ಕಳುಹಿಸಿದ - ಹೆಂಡತಿ ತೀರಿಕೊಂಡಿದ್ದಾಳೆ ; ರವಿವಾರ ಬದಲಿ ವ್ಯವಸ್ಥೆ ಮಾಡಿ.

****

ಡಾಕ್ಟರ್ - ನಿಮ್ಮ ಗಂಡನಿಗೆ ತುಂಬಾ ವಿಶ್ರಾಂತಿ ಬೇಕು.

ರೋಗಿಯ ಹೆಂಡತಿ - ಅವರು ನನ್ನ ಮಾತೇ ಕೇಳುವದಿಲ್ಲ.

ಡಾಕ್ಟರ್ - ಹಾಗಾದರೆ ಪರವಾಗಿಲ್ಲ!