ಇದು ನನ್ನ ಶ್ರೀಮತಿಗೆ ಯಾರೋ ಹೇಳಿದ್ದು - ತುಂಬಾ ಚೆನ್ನಾಗಿರುತ್ತೆ - ಮೈಸೂರ್ ಪಾಕ್ ಥರ
ಆದರೇ ಮಾಡೋದು ತೀರಾ ಸಾಧಾರಣ

ಮಾಡುವ ವಿಧಾನ

ಮೇಲೆ ಹೇಳಿದ ಎಲ್ಲ ಪರಿಕರಗಳನ್ನು ಒಂದು ಬಾಣಲೆಯಲ್ಲಿ ಹಾಕಿ (ಗ್ಯಾಸ್ ಸಿಮ್ ನಲ್ಲಿರಲಿ)
ಮೊಗಚುವ ಕೈನಲ್ಲಿ ತಿರುವುತ್ತಾ ಇರಿ - ಹತ್ತು ನಿಮಿಷಗಳ ನಂತರ ಆ ಮಿಶ್ರಣ ಪಾಕವಾಗಿ
ಸುಮಧುರ ವಾಸನೆ ಬರುವುದು. ಆಗ ಅದನ್ನು ಒಲೆಯ ಮೇಲಿನಿಂದ ಇಳಿಸಿ
ಒಂದು ತಟ್ಟೆಗೆ ತುಪ್ಪ ಸವರಿ - ಅದಕ್ಕೆ ಈ ಪಾಕವನ್ನು ಸುರಿದು - ಸಮವಾಗಿ ತಟ್ಟಿಕೊಳ್ಳಿ
ಆ ನಂತರ ಯಾವ ಆಕರಕ್ಕೆ ಬೇಕೋ ಹಾಗೆ ಕತ್ತರಿಸಿಕೊಳ್ಳಿ

ತಿಂದು ನೋಡಿ - ನಮ್ಮ ಮನೆಯಲ್ಲಿ ತಿಂಗಳಿಗೊಮ್ಮೆ ಮಕ್ಕಳಿಗೆ ಇದು ಬೇಕೇ ಬೇಕು

ಸಾಧಾರಣವಾಗಿ ೧೫-೨೦ ಜನಗಳಿಗೆ

90

ಮೈಸೂರು ಪಾಕಿನಂತೆ, ಆದರೆ ಮಾಡಲು ಸುಲಭ, ಈ ಸಿಹಿ ತಿಂಡಿ.

೧ ಬಟ್ಟಲು ಕಡಲೆ ಹಿಟ್ಟು

೧ ಬಟ್ಟಲು ತುಪ್ಪ

೧ ಬಟ್ಟಲು ಹಾಲು

೧ ಬಟ್ಟಲು ತುರಿದ ತೆಂಗಿನಕಾಯಿ

೩ ಬಟ್ಟಲು ಸಕ್ಕರೆ