ನಮ್ಮನ್ನು ಅಗಲಿದ ಹಿರಿಯರಿಗೆ ಆಹಾರವನ್ನು ನೀಡುವ ದಿನ. ಪಿತೃಪಕ್ಷದ ಕೊನೇ ದಿನ ಅಗಲಿದ ಎಲ್ಲಾ ಹಿರಿಯರನ್ನು ನೆನಪಿಸಿ, ಅವರಿಗೆ ತರ್ಪಣ ನೀಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಅವರು ಅಗಲಿದ ದಿನಾಂಕ ನೆನಪಿಲ್ಲವೆಂದಾದರೂ ಈ ದಿನ ನಾವು ಶ್ರಾದ್ಧ ತರ್ಪಣದ ಮೂಲಕ ಅವರನ್ನು ತೃಪ್ತಿ ಪಡಿಸಿ, ನಮಗವರು ಆಶೀರ್ವಾದ ನೀಡುತ್ತಾರೆ ಎಂಬ ನಂಬಿಕೆ ನಮ್ಮ ಧರ್ಮ ಗ್ರಂಥಗಳಲ್ಲಿ ಅಡಗಿದೆ. ಹಿರಿಯರಿಂದಲೂ ನಡೆದುಕೊಂಡು ಬಂದ ಆಚರಣೆಗಳಾಗಿವೆ. ಇವುಗಳನ್ನು ಆಚರಿಸುವುದರಿಂದ ಏನು ಲಾಭವೆಂದು ಯೋಚಿಸಿದರೆ ನಮ್ಮ ಹಿರಿಯರು ನಮಗಾಗಿ ಏನೆಲ್ಲಾ ತ್ಯಾಗ ಮಾಡಿದ್ದಾರೆ ? ತಂದೆತಾಯಿ ಋಣ ತೀರಿಸಲು ಸಾಧ್ಯವೇ? ಅವರಿಂದಾಗಿ ನಾವು ಭೂಮಿಯ ಬೆಳಕನ್ನು ಕಂಡವರು. ಆ ಋಣಭಾರ ನಮ್ಮ ಮೇಲಿದೆ. ನಾವು ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡಿರುತ್ತೇವೆ. ಈ ಆಚರಣೆಯ ಮೂಲಕ ಅದನ್ನು ನಿವಾರಿಸಿ, ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿ ಆಶೀರ್ವಚನ ಪಡೆಯಬಹುದು. ಪಂಚ ಮಹಾಯಜ್ಞಗಳಲ್ಲಿ ಒಂದು ಈ ಆಚರಣೆ, ಫಲ ದೊರೆಯುತ್ತದೆ ಎಂಬ ನಂಬಿಕೆಯ ಉಲ್ಲೇಖ ಗ್ರಂಥದಲ್ಲಿ ಓದಬಹುದು. ಮನೆಯಲ್ಲಿ, ಕುಟುಂಬದಲ್ಲಿ ಇರುವ ನಕಾರಾತ್ಮಕ ಶಕ್ತಿಗಳ ಹೋಗಲಾಡಿಸುವಿಕೆ, ಕ್ಷೇಮ, ಸೌಖ್ಯಕ್ಕಾಗಿ ಆಚರಣೆ. ಪಿಂಡ ತರ್ಪಣ ಮಾಡಿ ಕಾಗೆಗಳಿಗೆ, ಹಸುಗಳಿಗೆ ಆಹಾರ ನೀಡಿ, ದಾನಧರ್ಮಾದಿಗಳನ್ನು ಮಾಡಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಅಗಲಿದ ಹಿರಿಯರನ್ನು ಸಂತೃಪ್ತಿ ಪಡಿಸಿ ಉಣ್ಣುತ್ತೇವೆ. ಎಲ್ಲಾ ಆಚರಣೆಗಳೂ ಧಾರ್ಮಿಕ ನೆಲೆಗಟ್ಟಿನಡಿಯೇ ನಿಂತಿದೆ.
ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಮಹಾಲಯ ಅಮಾವಾಸ್ಯೆಯ ಮರುದಿನದಿಂದ ದುರ್ಗಾ ಪೂಜೆ ಆರಂಭ. ಪಿತೃಪಕ್ಷದ ಕೊನೆ ದೇವಿಯ ಆರಾಧನೆ ಪ್ರಾರಂಭ. ನವದುರ್ಗೆಯರ ಪೂಜೆಗೆ ನಾಂದಿ. ಒಟ್ಟಿನಲ್ಲಿ ಎಲ್ಲವೂ ಧಾರ್ಮಿಕ ನಂಬಿಕೆಗಳಡಿಯಲ್ಲಿ ಆಚರಿಸಲ್ಪಡುತ್ತದೆ.
(ಮಾಹಿತಿ ಸಂಗ್ರಹ: ಹಿರಿಯರಿಂದ)
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!