ನಾನು, ನನ್ನದು, ನನ್ನ ಅನ್ನ, ನನ್ನ ಬಟ್ಟೆ, ನನ್ನ ಗಂಡ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಹೆತ್ತವರು, ನನ್ನ ಬಂಧು ಬಳಗದವರು--ಈ ರೀತಿ ‘ನನ್ನ ನನ್ನ’  ಹೇಳುವ ಮನುಷ್ಯ ಎನ್ನುವ ಕುರಿಯನ್ನು ಕಾಲ ಹೇಳುವ ತೋಳ ಬಂದು ಎಷ್ಟು ಹೊತ್ತಿಗೆ ತೆಗೆದುಕೊಂಡು ಹೋಗಬಹುದೆಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಕಾಲ ಎನ್ನುವ ತೋಳ ಕೊಂದು ಹಾಕಬಹುದು. ಹಾಗಾಗಿ ನಾನು, ನನ್ನದು ಬೇಕೇ? ಈ ಎಲ್ಲದರಲ್ಲಿಯೂ ‘ನಾವು, ನಮ್ಮದು’  ಬಂದರೆ ಸೊಗಸಲ್ಲವೇ? ನಮ್ಮೆಲ್ಲರದು ಎಂದರೆ ಆ ಕಣ್ಣಿಗೆ ಕಾಣದ ಶಕ್ತಿ ಭಗವಂತ ಸಹ ಮೆಚ್ಚಬಹುದು, ಅವನ ಆಶೀರ್ವಾದ ಸದಾ ಇರಬಹುದು.   

*ಅಶನಂ ಮೇ ವಸನಂ ಮೇ* *ಜಾಯಾ ಮೇ  ಬಂಧುವರ್ಗೋ* *ಮೇ /*

*ಇತಿ ಮೇ  ಮೇ ಕುರ್ವಾಣಂ* *ಕಾಲವೃಕೋ ಹಂತಿ ಪುರುಷಾಜಂ//*

ನಮ್ಮ ಬಾಳಿನಲ್ಲಿ ಇದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ.

ಆಧಾರ-ಸರಳ ಸುಭಾಷಿತ

ಸಂಗ್ರಹ: ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ