ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ
ಕವಿ ಮಾಡಿದೆ ಇಂದು ನನ್ನನು
ನನ್ನ ಮನದ ಮೌನ,ನಿನ್ನ ನಗೆಯ ಸಿಂಚನ
ಕಾಣದ ನನ್ನ ಕನಸಿಗೆ ಸೂರು ಏನು?
ಕುಣಿದಾಡಿದೆ ಪ್ರತಿ ಗಳಿಗೆಯು, ನಿನ್ನ ನೆನೆಯುತಲಿ ಮನವಿಂದು,
ನಿನ್ನ ಹೆಸರೊಂದೆ ಉಸಿರಾಯಿತೆ,ಈ ಜನುಮಕೆ ಇನ್ನೆನೂ
ನಮ್ಮಲ್ಲಿನ ಈ ಅಂತರ ಇನ್ನೂ ಸರಿಯೇ?
ನಿಲಬಾರದೆ ನಗೆಬೀರುತಾ ನನ್ನ ಉಸಿರೇ
ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ
ಕವಿ ಮಾಡಿದೆ ಇಂದು ನನ್ನನು
ಆ ನಿನ್ನ ನಡಿಗೆ , ನೀ ತೊಟ್ಟ ಉಡುಗೆ,....ಅಪ್ಸರೆಯೆ ಇವಳೆ, ನಾ ಈಗ ನಂಬಲೇ
ಕಣ್ಣಲ್ಲಿನ ಕಾಡಿಗೆ, ಕಾಮನ ಬಿಲ್ಲೆ ಭೂಮಿಗೆ...ರಂಗಾಗಿದೆ ಬದುಕು, ಇನ್ನೇನು ಬೇಕು
ಕಣ್ಣರೆಪ್ಪೆಯಂಚಿನಲ್ಲಿ,ಪ್ರೀತಿ ಕನಸ ರಂಗೋಲಿ.. ನಲಿದಾಡಲು ನೀ ಇನ್ನೂ, ಜೇನುಗೂಡು ನಾನು
ಈ ಹೃದಯದಲೆಯ ಮೇಲೆ ನಿನ್ನ ರಾಜ್ಯಭಾರಾವಿನ್ನು
ತುಟಿಯಂಚಿನ ಆ ನಡುಕ ಇನ್ನೂ ತರವೇ?
ನಗಬಾರದೆ ನನ್ನ ನೋಡುತಾ ನನ್ನ ಉಸಿರೇ
ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ
ಕವಿ ಮಾಡಿದೆ ಇಂದು ನನ್ನನು
ತಂಗಾಳಿಯಲ್ಲಿ, ನೀನಾಡಿದ ಮಾತು,ಅನುರಾಗ ತಂದು,ಮೂಕನಾದೆ ಇಂದು
ನೀ ಇಲ್ಲದೆ ನಲಿವೆಕೋ ನೋವೆನಿಸಿದೆ,ಈ ನೊವಲ್ಲಿ ನಿನ್ನ ಹೆಸರ ಸವಿಯೊಂದಿದೆ
ಸೋತುಹೋದ ಮನಕೆ , ಸವ್ಯಸಾಚಿಯಾಗೆ, ನನ್ನ ಹಗಲಗನಸು ಒಮ್ಮೆ, ನನಸು ಮಾಡಿ ನೋಡೆ
ನೀ ಇಲ್ಲದೆ ಬೆಳಕ ಕಾಣದು ಬದುಕಿನ್ನೂ
ಕಣ್ಣಂಚಿನ ಈ ನಾಚಿಕೆ ಇನ್ನೂ ತರವೇ?
ನಿಲಬಾರದೆ ನಗೆಬೀರುತಾ ನನ್ನ ಉಸಿರೇ
ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ
ಕವಿ ಮಾಡಿದೆ ಇಂದು ನನ್ನನು
ಸ್ನೇಹದಿಂದ
ಮಹಾಂತೇಶ(ಮಾನು)
ಪ್ರತಿಕ್ರಿಯೆ (3)