ಗಾಡ್ ಅಲ್ಲಾ ಔರ್ ಭಗವಾನ್ ನೆ ಬನಾಯ ಇಕ್ ಇನ್‌ಸಾನ್..." KRRISH " http://www.youtube.com/watch?v=SPb8eCXMPe4

Krish 3 ಸಿನೆಮಾ ಹಿಟ್ ಆಗಬೇಕಾದರೆ ಇನ್ನೊಂದು " r " ಸೇರಿಸಬೇಕೆಂದು ನ್ಯುಮಾರಾಲೋಜಿಸ್ಟ್ ಹೇಳಿದ್ದರಂತೆ. ಸಿನೆಮಾ ಈಗ ಸೂಪರ್ ಹಿಟ್. ನನ್ನ ಈ ಬರಹ ಸೂಪರ್ ಹಿಟ್ ಅಲ್ಲದಿದ್ದರೂ ,೫೦ ಆದರೂ ಹಿಟ್ಸ್ ಪಡೆಯಲಿ ಅಂದು ಒಂದ್ನಾಲ್ಕು " r " ಎಕ್ಸ್‌ಟ್ರಾ ಸೇರಿಸಿದೆ.

 ಹಾಲಿವುಡ್‌ನ ಸೂಪರ್ ಹೀರೋಗಳ ಸಿನೆಮಾಗಳನ್ನು ಮೀರಿಸುವಂತೆ " KRRISH 3 "  ಮಾಡಿರುವ ರಾಕೇಶ್ ರೋಶನ್‌ಗೆ ಜೈ. ಚಿತ್ರದಲ್ಲಿ ಹೃತಿಕ್‌ನ ಡ್ಯಾನ್ಸ್, ಆಕ್ಟಿಂಗ್, ಫೈಟ್ ಎಲ್ಲವೂ ಸೂಪರ್ ಸೆ ಊಪರ್! ಹೃತಿಕ್ ಕೃಶ್‌ನ ತಂದೆಯ ಪಾತ್ರವನ್ನೂ(ಡಬಲ್ ರೋಲ್) ಚೆನ್ನಾಗಿ ನಿಭಾಯಿಸಿರುವನು.

ಕತೆ ಸಹ ವಿಶಿಷ್ಟ. ಮಾನವರ್!(ಮಾನವ+ಜಾನ್‌ವರ್), ಸೋಲಾರ್ ಪವರ್ ಬಗ್ಗೆ ಸಿನೆಮಾ ನೋಡಿಯೇ ತಿಳಿದುಕೊಳ್ಳಿ.

ಮಾತಿನಲ್ಲಿ, ಕಣ್ಣಲ್ಲಿ, ನಗುವಲ್ಲಿ ಕ್ರೌರ್ಯ ತುಂಬಿದ ವಿಲನ್ ಪಾತ್ರಧಾರಿ "ವಿವೇಕ್ ಒಬೆರಾಯ್" ಬೆರಳಲ್ಲೇ ಜಗತ್ತನ್ನಲ್ಲಾಡಿಸಬಲ್ಲ!  

ಹೀರೋಯಿನ್ ಪ್ರಿಯಾಂಕಾಳಷ್ಟೇ ವಿಲನ್ ಕಂಗ್‌ನಾ ಮಿಂಚಿದ್ದಾಳೆ.

ಮೊದಲೆರಡು ಸಿನೆಮಾಗಳ ಹಾಡುಗಳು ಸೂಪರ್ ಹಿಟ್ ಆದ್ದರಿಂದ ಈ ಸಿನೆಮಾದ ಹಾಡುಗಳ ಬಗ್ಗೆ ಬಹಳ ನಿರೀಕ್ಷೆಯಿತ್ತು. ಆ ಮಟ್ಟಕ್ಕಿಲ್ಲದಿದ್ದರೂ ಸಿನೆಮಾದಲ್ಲಿ ನೋಡುವಾಗ ಇಷ್ಟವಾಗುವುದು. ದೀಪಾವಳಿ ಹಬ್ಬದ ರಜೆ ಪಟಾಕಿ ಸುಟ್ಟು ವಾತಾವರಣ ಹಾಳುಮಾಡಬೇಡಿ. ಕೃಶ್ ೩ ನೋಡಿ.ಎರಡೂವರೆ ಗಂಟೆ ಪೂರ್ತಿ ಮನರಂಜನೆ. ಚಿತ್ರದ ಬಗ್ಗೆ ಪಾತ್ರಧಾರಿಗಳು ಏನನ್ನುತ್ತಾರೆ..ಇಲ್ಲಿ ನೋಡಿ-

 ___LINK_OPEN_href="http://www.dailymotion.com/video/x16mov9_krrish-3-miking-of-krrish-3-full-movie-2013-exclusive-behind-the-scenes-sets-of-krrish-3_shortfilms"___http://www.dailymotion.com/video/x16mov9_krrish-3-miking-of-krrish-3-ful...