ಹನಿ ಹನಿ ಮಳೆಯ ಆವರಣ 

ಸಾಗುವ ದಾರಿಗೆ ರವಿಯ ಹೊಂಗಿರಣ 

ಜಿಟಿ ಜಿಟಿ ಮಳೆಯು ತಂದಿದೆ ಚಳಿಯು 

ಸಾಗುವ ದಾರಿಗೆ ತುಂಬಿದೆ ಕಳೆಯು 

 

ಮೋಡಗಳೆಲ್ಲ ಸೇರಿದವು

ಗಾಳಿಗೆ ಹಾರುತ್ತ ಸಾಗಿದವು 

ಸುರಿಸಿದವು ಮಳೆ ಸುರಿಸಿದವು 

ಇಳೆಯ ಹೊಳೆಯ ತುಂಬಿದವು 

 

ಮರಗಿಡಗಳುಟ್ಟಿದೆ ಹಸಿರು ಸೀರೆಯ 

ತೊಟ್ಟಿದೆ ಇಬ್ಬನಿಗಳ ಓಲೆ ಜುಮುಕಿಯ

ಹೊಸ ರಾಗವ ನುಡಿಸಿದೆ ಕೋಗಿಲೆಯು 

ನವ ನಾಟ್ಯವನಾಡಿದೆ ನವಿಲುಗಳು 

 

ಬೀಸಿದ ಗಾಳಿಗೆ ಚಿಗುರೆಲೆಯು 

ಕುಣಿಯುತ್ತ ಕಲಿಸಿದೆ ನಲಿಯುವುದು

ನೀರೆಯ ಮೀರಿಸಿ ಪ್ರಕೃತಿಯು 

ಸಿಂಗರಿಸಿಕೊಂಡು ನಾಚುತ್ತಲಿಹಳು 

 

-ಕೆಕೆ (ಕೀರ್ತನ್ ಕೆ)