ನಾನಿರುವ ಈ ಜಾಗ

ಕೇಳುತ್ತಿದೆ ಈಗೀಗ

ನನ್ನ ಏತಕ್ಕೆ ಬಂದೆ ಎಂದು

ಉತ್ತರವು ತಿಳಿದಿಲ್ಲ

ಕೇಳುವುದಕ್ಕೂ ಯಾರಿಲ್ಲ

ನನಗೆ ಇಲ್ಲಿ ಹಿಂದು ಮುಂದು

ನೂರಾರು ಆಲೋಚನೆಗಳೇ ನನಗೆ ಆಗಿದೆ ಬಂಧು

ನನ್ನ ನಾನೇ ಕೇಳಬೇಕು ಹೇಗಿದ್ದೀಯಾ ಎಂದು

ಸಂತೋಷವು ಸಂತಾಪವು

ಹಂಚಿಕೊಳ್ಳಲು ಇರುವರು

ನಗು ಅಳುಗಳು ಎಂಬಿಬ್ಬರು ಜೊತೆಗಾರರು

ನನ್ನೊಳಗಿನ ಆಂತರ್ಯವು

ನನಗಿನ್ನೂ ಅಪರಿಚಿತವು

ಏಕಾಂತದ ಈ ಯಾತನೆ ಯಾರು ಕೇಳುವರು

ಕೇಳಲು ಯಾರಿಲ್ಲದೆ ಮಾತೀಗ ಮೌನವಾಗಿದೆ

ಸಹಿಸಲು ಆಗದೆ ಸರಾಗವಾಗಿ ಕವಿತೆ ಮೂಡಿದೆ

-ಕೆಕೆ (ಕೀರ್ತನ್ ಕೆ)