ಸುರಿಯಲಿ ಮಳೆಯು ಹೀಗೆಯೇ
ನೆನೆಯುತ್ತ ನಡೆಯುವೆ ನಾ ಹಾಗೆಯೇ
ಜಾರುವ ಕಣ್ಣ ಹನಿಯು
ಸೇರಲಿ ತವರು ಮನೆಯು
ನಾ ನೀಡುವೆ ಇಂದು ವಿಚ್ಛೇದನ
ನನ್ನ ಜೊತೆಗಿರುವ ಅಳುವಿಗೆ
ಖಾಲಿಯಾಗಲಿ ನನ್ನ ಈ ಮನ
ತೆರೆದುಕೊಳ್ಳಲು ಹೊಸ ಬದುಕಿಗೆ
ನಿಲ್ಲಲೇಬೇಕು ಈ ಮಳೆಯು
ಕಳೆಯಲಿ ಬೇಗ ಆಕಾಶದ ಕೊಳೆಯು
ಹಗುರ ಆಗುವಾಗ ಇದೆಂತಹ ಖುಷಿ
ಹಿಂದೆಂದೂ ನಾ ಕಂಡಿರದಂತಹ
ಹೊಸದಾಗಿ ಶುರುವಾಗಿದೆ ಬದುಕ ಕೃಷಿ
ತಿದ್ದಿ ಬಿಡುವೇ ನನ್ನ ಹಣೆ ಬರಹ
-ಕೆಕೆ (ಕೀರ್ತನ್ ಕೆ)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!