ಮಳೆ ಸುರಿದಿದೆ ಇಳೆಗೆ
ಮನ ಜಾರಿದೆ ನಿನಗೆ
ಒಲವಾಗಿದೆ ನನಗೆ
ಮನಸೇರದೆ ಕೊನೆಗೆ
ಮುಚ್ಚಿರುವುದು ನಿನ್ನ ಮನದ ಬಾಗಿಲೆನಗೆ
ಇಣುಕಿ ನೋಡಲೊಂದೂ ಕಿಟಕಿಯಿಲ್ಲ ನಿನ್ನ ಮನದೊಳಗೆ
ತಡೆಯಲಾರದ ಸೆಳೆತ ನನಗೆ ನಿನ್ನೆಡೆಗೆ
ನೀ ಓಡುತ್ತಿರುವೆ ನನ್ನಗಲಿ ಯಾವ ಕಡೆಗೆ
ಇರಲಾರೆ ನಾನೀಗ ಕುಳಿತು ಒಂದೆಡೆಗೆ
ಚಂಚಲತೆ ತುಂಬಿದೆ ನನ್ನ ಚಿತ್ತದೊಳಗೆ
ನಿನಗಾಗಿ ನಡೆದಿದೆ ಯುದ್ಧವೇ ಅದರೊಳಗೆ
ಸೋತರೂ ಬರುತ್ತಿದೆ ಒಂದು ಮುಗುಳು ನಗೆ
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!