ಸಾಗಿದೆ ನನ್ನೀ ಪಯಣ

ಗುರಿ ಮರೆತ ದೋಣಿಯಲ್ಲಿ

ಸಿಗಬಾರದೇ ನೀನು ನನಗೆ

ದಡವಾಗಿ ನದಿಯ ತೀರದಲ್ಲಿ

ಆಗು ನೀ ನನ್ನ ಗುರಿಯೂ...

ತಲುಪುವೆನು ಪ್ರತೀ ಸರಿಯೂ...

ನದಿಯಲಿ ಸಿಲುಕಿದ ದೋಣಿಯ ಹಾಗೆ

ನಡುಗಿದೆ ನನ್ನೀ ಜೀವನ

ಕುಶಲ ಅಂಬಿಗನ ಹುಟ್ಟಿನ ಹಾಗೆ

ಆಗು ನೀ ನನ್ನ ಚೇತನ

ನೀಡು ನೀ ಈಗ ಪ್ರೀತಿಯನು...

ಅದೇ ನನ್ನ ಜೀವಕೆ ಸಂಜೀವಿನಿಯೂ...

- ಕೆಕೆ (ಕೀರ್ತನ್ ಕೆ)