ಈ ನನ್ನ ಪುಟ್ಟ ಹೃದಯ

ನೀನಿರುವ ದೇವಾಲಯ

ಅಲ್ಲಿರುವ ನಿನ್ನ ಶಿಲೆಯ

ಧ್ಯಾನಿಸುವ ಪ್ರತಿ ಸಮಯ

ಈ ನನ್ನ ಉಸಿರೇ ನಿನಗೆ ಅಭಿಷೇಕ

ನನ್ನ ಹೃದಯ ಬಡಿತವೇ ನಿನ್ನಯ ಮಂತ್ರಘೋಷ

ಅನುದಿನ ಪೂಜಿಸುವೆ ನಿನ್ನ

ನಂಬುತಲಿ ನೀನೀಡುವೆ ದರ್ಶನವನ್ನ

ಆದೆ ನಾ ಖುಷಿಯೂ ನಿನ್ನ ಧ್ಯಾನದಿಂದ

ಆದೆ ನಾ ಕವಿಯೂ ನಿನ್ನ ಪ್ರೇಮದಿಂದ

-ಕೆಕೆ (ಕೀರ್ತನ್ ಕೆ)