ಏಕಾಂತ ಕಾಡುತಿದೆ ನನ್ನೀಗ

ಯಾಕಿಂಥ ಬೇಸರವೂ ತುಂಬಿತೀಗ

ಬರೀ ನಿನ್ನದೇ ಧ್ಯಾನ ಮನಸಿನಲಿ

ಸಿಕ್ಕಿತು ನಿನ್ನಯ ಪ್ರೇಮ ಕನಸಿನಲಿ

ಉತ್ತರವಿರದ ಪ್ರಶ್ನೆಯೇ ನೀನು

ಉತ್ತರಿಸಲು ಯತ್ನಿಸಿದೆ ನಾನು

ಪ್ರೇಮವೇ ಇರದ ಬಾಳಲಿ ಇಂದು

ಮಾಡಿದೆ ಶೂನ್ಯವೂ ಮನೆಯೊಂದನ್ನು

ಹುಡುಕುತ ಹುಡುಕುತ ಅಲೆದೆನು ನಾನು

ಕೈಗೆಟುಕದ ನಕ್ಷತ್ರವು ನೀನು

ಗಿಡಮರ ಕಾದಿದೆ ಹೇಳಲು ಏನೋ

ಮರೆತೇ ಹೋದೆನು ದಾರಿಯ ನಾನು

ನಾವಿಕನಿಲ್ಲದ ದೋಣಿಯಂತೆ

ಆಗಿದೆ ನನ್ನ ಬದುಕಿನ ಸಂತೆ

ಪ್ರೀತಿಯೇ ದೇವರು ಪ್ರೇಮವೇ ದೈವವೂ

ಎನ್ನುತ ನಂಬಿ ಹೋಯಿತು ಜೀವವು

- ಕೆಕೆ (ಕೀರ್ತನ್ ಕೆ)