ಮೋಡವು ಕವಿದಿದೆ ಚಂದಿರನನ್ನು

ಮೂಡಿತು ಕತ್ತಲೆ ಹುಣ್ಣಿಮೆಯಂದು

ಸಾಗಿದೆ ಪಯಣ ಸಾಗರದ ದಡದಲ್ಲಿಂದು

ಜಾರಿತು ಹನಿಯೂ ಕಣ್ಣಂಚಲಿ ನೊಂದು

ಬಲು ಹತ್ತಿರವಿದ್ದರೂ ಕಾಡಿದೆ ದೂರವೂ

ಈ ಹೃದಯದ ಭಾರಕ್ಕೆ ಆದೇನು ಮೂಗನು

ನನ್ನ ಕೈಗಳು ಕಾದವು ನಿನ್ನ ಕೈಗಳ ಹಿಡಿಯಲು

ಮನ ನೊಂದಿತು ನಿನ್ನ ಕೈ ಅವನ ಕೈಯ ಸೇರಲು

ನನ್ನ ಮೌನ ನಿನಗೆ ಅರ್ಥವಾಗದೆ ಹೋಯಿತು

ಅವನ ಮೌನ ಮಾತ್ರ ನಿನ್ನ ಮನಸ್ಸು ಕಾಡಿತು

ಸಂಶಯ ಒಂದು ನನಗೆ ಮೂಡುತ್ತಲಿಹುದು

ಅರಿವಾಗದೇ ಇರುವುದೋ ನಿನಗೆ ನನ್ನ ಪ್ರೇಮದ ಒಲವು

- ಕೆಕೆ (ಕೀರ್ತನ್ ಕೆ)