ನಿನ್ನ ಕನಸಿನ ಹುಡುಗ ನಾನಾಗಲಿಲ್ಲ

ನನ್ನ ಕನಸಿನಲಿ ನೀನೇನೇ ಎಲ್ಲಾ

ಅದೆಷ್ಟೇ ಹೇಳಿದರೂ ಮನ ಕೇಳುತ್ತಿಲ್ಲ

ನೀ ಸಿಗದಿರೆ ಈ ಬಾಳಿಗೆ ಅರ್ಥವಿಲ್ಲ

ನಿನ್ನ ಮಾತನು ಕೇಳಲು ನನ್ನ ಕಿವಿಯೂ ಕಾದಿದೆ

ನಿನ್ನ ತುಂಟ ನೋಟವ ನನ್ನ ಕಣ್ಣು ಬೇಡಿದೆ

ನನ್ನ ಮನ ಕೂಗಿದೆ

ನೀನೇ ಬೇಕೆಂದು ಹೇಳಿದೆ

ಕಾಣದಂಥ ಒಂದು ನೋವು

ನನ್ನ ಕಾಡಿ ಹೋಗಿದೆ

ಸುರಿವ ಮಳೆಯಲಿ ನೆನೆದೆನು

ಅಡಗಿಸಲು ಕಣ್ಣ ಹನಿಯನು

ಎಷ್ಟು ದಿನ ಕೊರಗಲಿ ಹೀಗೆ

ನೆನೆದು ನೆನೆದು ನಿನ್ನನ್ನು

-ಕೆಕೆ (ಕೀರ್ತನ್ ಕೆ)