ಯಾಕೆ ಈ ಥರ ಆದೆ ನಾನು

ಇರಲಾರೆ ಸಿಗದಿರೇ ಇನ್ನು ನೀನು

ಮಾತು ಮೌನವಾಗಿದೆ

ಮನಸ್ಸು ಮಂಕಾಗಿದೆ

ಭಾವನೆಗಳ ಬಾಣಕ್ಕೆ

ಹೃದಯ ಚೂರಾಗಿದೆ

ಒಡೆದ ಹೃದಯದಲ್ಲೂ ನಾನು

ನಿನ್ನೇ ನೋಡುತ್ತಿರುವೆನು

ಈ ಪ್ರೇಮದಾಟದಲ್ಲಿ ನಾನು

ನನ್ನೇ ಮರೆತಿರುವೆನು

ಮರೆವೆನು ಮರೆವೆನು ನಿನ್ನ

ಅಂದುಕೊಂಡರೆ ಆಗದು ಚಿನ್ನ

ಆಳವಾಗಿ ಪ್ರೇಮ ಬೇರು

ಆವರಿಸಿದೆ ನನ್ನ ತುಂಬಾ

ನನ್ನ ಸಾವು ಒಂದೇ ಇನ್ನೂ

ಸುಡಲು ಈ ಪ್ರೇಮ ವೃಕ್ಷವನ್ನು

ಇಡುತ್ತ ನೀನು ಕೊಳ್ಳಿಯನ್ನು

ಸುರಿಸು ಒಂದು ಹನಿ ಕಂಬನಿಯನ್ನು

ಸುರಿಸು.. ಒಂದು.. ಹನಿ.. ಕಂಬನಿಯನ್ನು...

- ಕೆಕೆ (ಕೀರ್ತನ್ ಕೆ)