ಅಳಿಸಿದೆ ಅಲೆಯು ಮರಳಲಿ ನಡೆದ

ಹೆಜ್ಜೆಯ ಗುರುತು

ಉಳಿದಿದೆ ಹಾಗೆ ಹೃದಯದಿ ಮೂಡಿದ

ಪ್ರೇಮದ ಚಿಗುರು

ನಿನ್ನ ಧ್ಯಾನದ ಶಕ್ತಿಯ ಹೀರಿ

ಚಿಗುರಾಗಿದೆ ವೃಕ್ಷ

ಬೀಳುತಿವೆ ಕೊಡಲಿಯ ಏಟು

ನೀಡುತಿದೆ ನಿನಗ್ಯಾಕೆ ಹರ್ಷ

ನನ್ನ ಮೌನ ಭಾವನೆಗಳ ಅಭಾವವಲ್ಲ ಕಣೇ

ನೋವ ತಿಳಿಸಲು ಪದಗಳೇ ಸಿಗುತ್ತಿಲ್ಲ ಅದಕ್ಯಾರು ಹೊಣೆ

- ಕೆಕೆ (ಕೀರ್ತನ್ ಕೆ)