ಬೇಡುವೆನು ನಿನ್ನ ನಾನು 

ಹಿಡಿಯೋ ಎನ್ನ ಕೈಯ ನೀನು 

 

ದಾರಿಯೂ ಕಾಣುತ್ತಲಿಲ್ಲ 

ತೋರಿಸುವವರು ಯಾರೂ ಇಲ್ಲ 

ಗುರಿ ಏನೆಂಬುದು ತಿಳಿದೇ ಇಲ್ಲ 

ಗುರುವಿನ ದಯೆ ಮೊದಲೇ ಇಲ್ಲ 

 

ಅಜ್ಞಾನವೂ ದೂರಾಗುತ್ತಲಿಲ್ಲ 

ಜ್ಞಾನ ಸನಿಹ ಸುಳಿಯುತ್ತಿಲ್ಲ 

ಕತ್ತಲ್ಯಾಕೋ ಓಡುತ್ತಿಲ್ಲ

ಬೆಳಕು ದಾಳಿ ಮಾಡುತ್ತಲೇ ಇಲ್ಲ

 

ಹುಟ್ಟಿಸೆಂದು ಕೇಳಲಿಲ್ಲ 

ಬದುಕಲಂತೂ ಆಗುತ್ತಲಿಲ್ಲ 

ಮರಣ ಯಾಕೋ ಬರುತ್ತಲೇ ಇಲ್ಲ 

ನಿನ್ನ ಕರುಣೆ ಸಿಗಲೇ ಇಲ್ಲ 

 

ನಿನ್ನ ಸ್ಮರಣೆ ಮನದಲ್ಲಿ ಇಲ್ಲ 

ನಾಲಿಗೆಗೆ ಇನ್ನೂ ಬೇಕಾಗಿಲ್ಲ 

ನಿನ್ನ ಅರಿವ ಪಡೆಯಲೇ ಇಲ್ಲ

ಕೀರ್ತನೆ ರಚಿಸಿ ಫಲವೇ ಇಲ್ಲ  

 

- ಕೆಕೆ (ಕೀರ್ತನ್ ಕೆ)