ಸಾಹಿತ್ಯವೇ ಬಲು ಚೆಂದ

ಸವಿದರೆ ಅತೀ ಆನಂದ

ಕನ್ನಡವೇ ಸವೆಯದ ಶ್ರೀಗಂಧ

ಎಷ್ಟೇ ತಿಂದರೂ

ನಿಲ್ಲದ ಹಸಿವು

ಈ ಕನ್ನಡ ಸಾಹಿತ್ಯವು

ಕರಗತಗೊಳ್ಳದೆ

ತಿರುಗುತ್ತಲಿರುವುದು

ಬರೆಯುವ ನನ್ನೀ ಲೇಖನಿಯು

ಹುಡುಕುತ್ತ ನಾನು

ಹಿಡಿಯಲು ಹೋದರೆ

ಪದಗಳು ಸಿಗದೆ ಹಾರುವುದು

ಹಾಗೋ ಹೀಗೋ

ಕೊನೆಗೂ ಹಿಡಿದು ಬರೆದರೆ

ಪ್ರಾಸವೇ ಮರೆಯಾಗುವುದು

ಅರ್ಪಿಸುವೆ ಈ ಕವಿತೆಯ

ಕನ್ನಡಮ್ಮನ ಪಾದಕ್ಕೆ

ಮೂಡಲಿ ಹಲವು ಕವನಗಳು ಆಕೆಯ ಅಲಂಕಾರಕ್ಕೆ

- ಕೆಕೆ (ಕೀರ್ತನ್ ಕೆ)