ಎಷ್ಟೋ ಕಷ್ಟ ಪಟ್ಟೆ ನೀನು 

ನನ್ನ ಭೂಮಿಗೆ ತರಲು ಅಂದು 

ಏನು ಮಾಡಲಿ ಹೇಳು ನಾನು 

ನಿನ್ನ ಋಣ ತೀರಿಸಲು ಇಂದು 

 

ಸಾಧ್ಯವಾಗದ ಮಾತಿದು... 

ಮುಗಿಯದ ಋುಣ ನಿನ್ನದು...

 

ಬಿಟ್ಟೆ ನೀ ಎಲ್ಲ ಸಂತೋಷವನ್ನು 

ಕೊಟ್ಟೆ ನೀ ನಂಗೆ ಅತಿ ಪ್ರೇಮವನ್ನು 

ನೀನೇ ಆದೆ ನನ್ನ ದೇವರಿಂದು

ಮಾಡಲಿ ಏನು ನಿನ್ನ ಸುಖ ಶಾಂತಿಗೆಂದು

 

ಕಷ್ಟವಾದರೂ ಮಾಡುವೆ... 

ನಿನ್ನ ನಗುವನ್ನು ನೋಡುವೆ...

 

ತಂದೆ ಇಲ್ಲದ ನೋವು ಅರಿವಿಗೆ 

ಬಾರದಂತೆ ನೀನು ಸಾಕಿದೆ

ನಿನ್ನ ಪ್ರೀತಿಯು ಅರ್ಥವಾಗದೆ 

ಮಾತು ಮಾತಿಗೂ ನಿನ್ನ ನೋಯಿಸಿದೆ 

 

ಬಂದು ನಾ ಇಂದು ಸೇರುವೆ...

ಮತ್ತೆ ನಿನ್ನಯ ಮಡಿಲಿಗೆ...

 

ಮುತ್ತಿನ ಪ್ರೀತಿಯ ಅರಸುತ್ತ ನಾನು 

ಕಡೆಗಣಿಸಿದೆ ತುತ್ತಿನ ಪ್ರೀತಿಯನ್ನು  

ದೂರಾದರೂ ಹರಿಸಿದೆ ನನ್ನನ್ನು ನೀನು 

ಸಿಗಲೆಂದು ನಾ ಬಯಸಿದ ಪ್ರೇಮವನ್ನು 

 

ಸಾಧ್ಯವಾದರೆ ಕ್ಷಮಿಸು ನನ್ನ...

ಬಿಟ್ಟು ಹೋಗೆನು ಎಂದೂ ನಿನ್ನ...

 

-ಕೆಕೆ (ಕೀರ್ತನ್ ಕೆ)