ಕರಗಿತು ಮೋಡ
ಸುರಿಸಿತು ನೋಡ
ಭೂಮಿಗೆ ಮೊದಲ ಮಳೆಯನ್ನು
ಚಿಗುರಿದೆ ಕನಸು
ಅರಳಿದೆ ಮನಸ್ಸು
ಪಡೆದು ಮೊದಲ ಪ್ರೀತಿಯನ್ನು
ಒಪ್ಪಿತು ಹೃದಯ
ಅಪ್ಪಿತು ಕಾಯ
ಹೀರಲು ತುಟಿಯ ಜೇನನ್ನು
ಕಂಕಣ ಕೂಡಿತು
ಬಾಸಿಂಗವು ಸೇರಿತು
ಹತ್ತಿತು ಜೋಡಿಯು ಹಸೆಮಣೆಯನ್ನು
ಬೆರಳು ಬೆಸೆಯಿತು
ಹೆಜ್ಜೆಯು ಸಾಗಿತು
ಶುರುವಾಯಿತು ದಾಂಪತ್ಯದ ಸೊಗಸಿನ್ನು
-ಕೆಕೆ (ಕೀರ್ತನ್ ಕೆ)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!