ಒಂದೇ ಸಮನೆ ಕಾಣುತಿರುವೆ ನಿನ್ನ ಕನಸನೆ
ಬಂದು ನೀನು ಸೇರು ನನ್ನ ಕಾಡದೆ ಸುಮ್ಮನೆ
ನೀ ನಡೆಯುವ ಹಾದಿಯಲ್ಲಿ
ಹೂವಿನ ಹಾಸಿಗೆ ಆಗುವೆ ನಾನು
ನೋವಿನ ದುಃಖ ಇರಲಿ ನನಗೆ
ನಗುತಿರು ಎಂದೂ ನೀನು
ಕಾಣದ ಕಡಲನು ಸೇರುವ ತವಕದಿ
ಸಾಗುವ ನದಿಯ ಹಾಗೆ
ಓಡುತ ಬರುವೆನು ನಿನ್ನಯ ಬಳಿಗೆ
ಮರೆಮಾಡು ಏಕಾಂತದ ಬೇಗೆ
ಹೇಳೊಮ್ಮೆ ನೀನು
ನಾ ನಿನ್ನ ಪ್ರೇಮಿ ಎಂದು
ಇರುವೆ ನಾನು ಕೊನೆಯವರೆಗೂ
ಈ ನೆನಪ ಹಿಡಿದುಕೊಂಡು
ಮಳೆಗಾಗಿ ಇಳೆಯೂ ಕಾದಿರುವ ಹಾಗೆ
ಕಾದಿರುವೆನು ನಿನ್ನ ಒಂದು ಸ್ಪರ್ಶಕೆ
ಬರಡಾದ ಭೂಮಿಯಂತಾಗಿದೆ ನನ್ನ ಜೀವ
ಬದುಕಿಸು ನೀನು ನೀಡಿ ಪ್ರೇಮಾಮೃತವ
ನನ್ನೆದೆಯ ತಾಳ ನಿನ್ನೆದೆಯ ರಾಗ
ಜೊತೆಯಾಗಿ ಬರಲಿ ಒಂದು ಕವಿತೆಯು
ಹಾಡುತ್ತಾ ಹೀಗೆ ಸಾಗೋಣ ಮುಂದೆ
ಮಾಡುತ್ತಾ ದಾಂಪತ್ಯದನುಸಂಧಾನವು
-ಕೆಕೆ (ಕೀರ್ತನ್ ಕೆ)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!