ಯಾರೂ ಇಲ್ಲದಿದ್ದರೇನು ನನಗೆ
ನೀನಿರುವೆ ಅಲ್ಲವೆ ಕೃಷ್ಣ
ಯಾರ ಸಂಗ ಸಿಗದಿದ್ದರೇನು ನನಗೆ
ನಮ್ಮ ಸಂಗ ಉಳಿಯುವುದಲ್ಲವೇ ಕೃಷ್ಣ
ನನ್ನನ್ನಿಷ್ಟ ಪಡುವವರನ್ನು ನಾನು
ಎಲ್ಲಿಯೂ ಕಾಣೆ ಕೃಷ್ಣ
ನಿನ್ನನ್ನಿಷ್ಟ ಪಡುತ್ತಿರುವೆ ನಾನು
ಅಷ್ಟೇ ಸಾಕು ನನಗೆ ಕೃಷ್ಣ
ಎಲ್ಲಿ ಹೋದರಲ್ಲಿ ದೂರುವರೆನ್ನ
ಯಾಕೋ ತಿಳಿಯೆ ಕೃಷ್ಣ
ನಿನ್ನ ದೂರವನ್ನಂತೂ ನಾನು
ತಾಳಲಾರೆನು ಕೃಷ್ಣ
ಬದುಕ ಚಿಂತೆಯಲ್ಲಿ ನನ್ನ
ಮನವು ಭಾರವಾಗಿದೆ ಕೃಷ್ಣ
ಮನದಲ್ಲೇ ಇರುವ ನಿನ್ನ
ಅರಿಯುವುದೆಂದು ನಾನು ಕೃಷ್ಣ
ಕಾಮ ಕ್ರೋಧ ಮೋಹವೆನ್ನ
ಆಳುತ್ತಿರುವುದು ಬಿಡದೆ ಕೃಷ್ಣ
ನಿನ್ನ ಸೇವಕನಾಗೋ ನನ್ನ
ಆಸೆ ಈಡೇರಿಸು ಕೃಷ್ಣ
ಯಾವ ವಿದ್ಯೆ ಕಲಿತರೆ ನಾನು
ನಿನ್ನ ದರ್ಶನ ಪಡೆವೆನು ಕೃಷ್ಣ
ಹಾಡುವ ಕೀರ್ತನೆ ಕೇಳುತ್ತ ನೀನು
ಒಲಿಯಬಾರದೆ ನನಗೆ ಕೃಷ್ಣ
- ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!