ತಂಪು ಚಂದ್ರನು ಕೆಂಪಾಗಿಹನು

ನೋಡುತ್ತ ನಿನ್ನಯ ರೂಪವನ್ನು

ತಿರುಗುವ ಭೂಮಿಯೂ ಮರುಗುತ್ತಲಿರುಹುದು

ಕಾಣುತ್ತ ನಿನ್ನಯ ಮೈಮಾಟವನ್ನು

ಜಕ್ಕಣ್ಣನು ನಾಚುತ್ತಲಿರುವನು

ಕೆತ್ತುತ್ತ ನಿನ್ನಯ ಶಿಲ್ಪವನ್ನು

ಕಾಳಿದಾಸನು ಕುಣಿಯುತ್ತಲಿರುವನು

ಹೊಗಳುತ್ತ ನಿನ್ನಯ ಅಂದವನ್ನು

ಹಾಡುತ್ತ ಹಾಡುತ್ತ ಆದೆನು ನಾನು

ನಿನ್ನಯ ಪ್ರೇಮಾರಾಧಕನು

ಏನು ಮಾಡಲಿ ಹೇಳು ನೀನು

ಆಗಲು ನಿನ್ನಯ ಮನಮೋಹಿತನು

- ಕೆಕೆ (ಕೀರ್ತನ್ ಕೆ)