ಬರೆಯುವೆ ಒಂದು ಕವಿತೆಯನ್ನು
ಮಾಡಲು ಪ್ರೇಮ ನಿವೇದನೆಯನ್ನು
ಪ್ರೇಮದ ಅರ್ಥವ ಚಿಂತಿಸಿ ಚಿಂತಿಸಿ
ಹಾಳೆಯು ಹರಿದು ಹೋಗುತ್ತಿದೆ
ಬರೆಯುವ ಲೇಖನಿ ಪದಗಳ ಹಸಿವಲ್ಲೆ
ಬರೆಯದೆ ಕುಸಿದು ನಿಲ್ಲುತ್ತಿದೆ
ಕಣ್ಣಲ್ಲಿ ಮೂಡಿದ ಕಲ್ಪನೆಯನ್ನು
ಬಣ್ಣಿಸಲಾಗದೆ ಮನ ಮರುಗುತ್ತಿದೆ
ಕನಸಲ್ಲಿ ಕಂಡ ನಿನ್ನ ರೂಪವ
ಚಿತ್ರಿಸಲಾಗದೆ ಕೈ ಸೊರಗುತ್ತಿದೆ
ಕೆಣಕುವೆ ನಿನ್ನನ್ನು ನಾನು
ಕಾಣಲು ನಿನ್ನಯ ಕೋಪವನ್ನು
ಕೋಪಿಸಿಕೊಂಡರೂ ಮೋಹಿಸುವೆನೂ
ಕಾರಣ ಕೋಪದಲ್ಲೂ ನೀ ಬಲು ರೂಪಿಸಿಯೂ
ಕನಸಲ್ಲಿ ತುಂಬಾ ಕೆಟ್ಟಿರುವೆ ಹುಡುಗಿ
ಮುತ್ತುಗಳ ಮಳೆ ಸುರಿಸಿರುವೆನು
ನಿನ್ನನುಮತಿ ಇಲ್ಲದೆ ಅಪ್ಪಿರುವರೆ ಗೆಳತಿ
ಮುಂದೇನು ಹೇಳಲಾರೆ ತುಸು ನಾಚಿಕೆಯೂ
ಕೈಯಲ್ಲಿ ಬಳೆಯು ಹಣೆಯಲ್ಲಿ ಕುಂಕುಮ
ಉಟ್ಟರೆ ನೀ ಸೀರೆಯನ್ನು
ಮೀರಿಸುವೆ ಆ ದೇವತೆಯನ್ನೂ
ಕೊಡು ನೀ ಪ್ರೇಮ ಪ್ರಸಾದವನ್ನು
ತಾಜ ಮಹಲನ್ನು ಮೀರುವ ಸ್ಮಾರಕ
ನನ್ನೀ ದೇಹ ದೇವಸ್ಥಾನವು
ಗರ್ಭಗುಡಿಯ ಹೋಲುವ ಹೃದಯವೇ
ನಿನ್ನೀ ವಾಸಸ್ಥಾನವು
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!