ಹುಡುಕುವೆ ಎಲ್ಲಿ ನೀನು

ಅಡಗಿರುವ ಶಾಂತಿಯನ್ನೇನು

ಮರೆತೆ ನಗುವುದ ನೀನು

ಕಾರಣ ಸಿಗುತ್ತಿಲ್ಲವೇನು

ಬಂಧಿಯಾದೆ ನೀನು

ನಿನ್ನ ಮನದ ಕಾರಾಗೃಹದಲ್ಲಿ

ಬಿಗಿದುಕೊಂಡಿರುವೆ ನಿನ್ನನ್ನು ನೀನು

ಆಲೋಚನೆಗಳ ಸರಪಳಿಯಲ್ಲಿ

ಯಾರು ಹೊಣೆ ಈ ಬಂಧನಕ್ಕೆ

ನಿನ್ನ ಅಜ್ಞಾನದ ಅಂಧಕಾರಕ್ಕೆ

ಕಣ್ಣು ಮುಚ್ಚಿ ನೀನು

ಕೂಗುತ್ತಿರುವೆ ಕವಿದಿದೆ ಕತ್ತಲೆ ಎಂದು

ಕೆಂಡದ ಮೇಲೆ ನಡೆಯುತ್ತ ನೀನು

ನರಳುತ್ತಿರುವೆ ಬೆಂಕಿಯ ಶಾಖಕ್ಕೆ ನೊಂದು

ಯಾರು ಕೊಟ್ಟರೋ ಈ ಶಿಕ್ಷೆಯು ನಿನಗೆ

ನೋವಿಗೆ ಕಾರಣ ಸಿಗುತ್ತಿಲ್ಲವೇ ಕೊನೆಗೆ

ಹುಡುಕುತ್ತಾ ವ್ಯರ್ಥ ಮಾಡಬೇಡ ಸಮಯ

ಅಡಗಿದೆ ಸುಖ ಶಾಂತಿ ನಿನ್ನಲ್ಲೇ ಗೆಳೆಯ

ಕಲಿಯೋ ನೀನು ನಗುವ ಕಲೆಯ

ಕಳಚೋ ನಿನ್ನನ್ನು ಕವಿದಿರುವ ಪೊರೆಯ

-ಕೆಕೆ (ಕೀರ್ತನ್ ಕೆ)