ಜೀವನದ ಪುಸ್ತಕದಿ ನೂರಾರು ಪುಟಗಳು

ಒಂದೊಂದು ಪುಟದಲ್ಲೂ ನಿನ್ನದೇ ನೆನಪುಗಳು

ಅಳಿಸಲಾಗುತ್ತಿಲ್ಲ ನಿನ್ನ ಹಳೆಯ ಗುರುತುಗಳು

ಓದುತ್ತ ಕುಂತಾಗ ಜಾರಿತು ಕಣ್ಣಿಂದ ಹನಿಗಳು

ಬಿದ್ದ ಕಂಬನಿಗಳಿಗೆ ಒದ್ದೆಯಾಗಿದೆ ಹಾಳೆ

ತೆವದಿ ಕಂಗಳು ಕಾಣದಾಗಿದೆ ಈ ವೇಳೆ

ಮನದ ಮಹಡಿಯ ಮೇಲೆ

ಸುರಿಯುತ್ತಿದೆ ನಿನ್ನ ನೆನಪುಗಳ ಮಳೆ

ಇನ್ನೇಕೆ ನನಗೆ ನೀನಿಲ್ಲದ ಆ ನಾಳೆ

ನೀನು ದೂರ ಹೋಗುವಾಗ

ಒಂದೊಮ್ಮೆ ತಿರುಗಿದರೂ ಸಾಕಿತ್ತು

ನನ್ನ ಮನಸ್ಸು ನಲಿಯಲು

ನಿನ್ನ ಮನದಲ್ಲಿ ನನಗೊಂದು

ಸಣ್ಣ ಜಾಗ ಬೇಕಿತ್ತು

ನನ್ನ ಪ್ರೀತಿ ಉಳಿಯಲು

ನಲಿವಿಲ್ಲ ಗೆಲುವಿಲ್ಲ ಅನಾಥ ಪ್ರೇಮಿಗೆ

ಸಾವಂತೂ ಬರುತ್ತಿಲ್ಲ

ನೆನಪುಗಳ ಸರಪಳಿಯಲ್ಲಿ

ಕಟ್ಟಿ ನನ್ನ ನೀನು

ಬಿಗಿಯಾಗಿ ಬಂಧಿಸಿದೆಯಲ್ಲ

ಹಾಡುವುದು ಬರೆಯುವುದು ಬಿಟ್ಟು

ಬೇರೆ ಕೆಲಸವೀಗ ಉಳಿದಿಲ್ಲ

ನೆನಪುಗಳ ಸುಟ್ಟು

ಅಸ್ತಿಯ ವಿಸರ್ಜಿಸುವ ವಿದ್ಯೆ

ನನಗಂತೂ ತಿಳಿದಿಲ್ಲ

-ಕೆಕೆ (ಕೀರ್ತನ್ ಕೆ)