ಮುಂಗಾರು ಮಳೆಯಂತೆ ಬಂದೆ ನೀನು!
ಬರಡಾಗಿದ್ದ ನನ್ನ ಹೃದಯ ಹಸಿಗೊಳಿಸಿ ಹೋದೆಯೇನು?
ನಿಲ್ಲದ ತುಂತುರು ನೀನೆಂದು ನಾನು,
ಕಂಡ ಕನಸೆಲ್ಲ ಮನದೊಳಗೆ ಚಿತೆ ಸೇರಿತೇನು?
ನಿನ್ನ ನೋಟಕ್ಕೆ ಅಂಕುರಿಸಿದೆ ನನ್ನಲ್ಲಿ ಪ್ರೇಮ
ನೀಡಿ ಪ್ರೀತಿಯ, ನೀನು ನೋಡಿಕೊ ಇದರ ಕ್ಷೇಮ
ನೀ ದೂರಾಗಿ, ನನ್ನ ಹೃದಯ ಸಾಮ್ರಾಜ್ಯಕ್ಕೆ ಕಾಡಿದೆ ಕ್ಷಾಮ
ನಿನ್ನ ಪಡೆಯಲು ಮಾಡಲಿ ನಾನ್ಯಾವ ಹೋಮ?
ಹೊಳೆಯುತ್ತಿರುವ ನಕ್ಷತ್ರ ನೀನು ನಲ್ಲೆ
ನನ್ನ ಪ್ರೀತಿಸಲು ನೀನ್ಯಾಕೆ ಎನ್ನುವೆ ಒಲ್ಲೆ?
ಅರಿವಿದೆ ನನಗೆ ನಾನಿರುವುದು ಭೂಮಿಯಲ್ಲೆ!
ನೀ ನನಗಾಗಿ ಧರೆಗಿಳಿದು, ಬದುಕು ನನ್ನ ಜೊತೆಯಲ್ಲೆ.
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!