ಆದೆ ನಾನು ಕವಿಯು

ನೀನು ನನ್ನ ತೊರೆದ ಮೇಲೆ

ಮೂಡಿ ಬಂದಿದೆ ಕವಿತೆಯು

ಹೇಳುತ್ತ ಭಗ್ನ ಪ್ರೇಮದ ಲೀಲೆ

ನನಗರಿವಿಲ್ಲದೇ, ನಿನ್ನ ನಾ ಪ್ರೀತಿಸಿದೆ

ಒಪ್ಪಿಗೆಯ ಮುಂಚೆ, ಹೃದಯದಿ ನೀ ಆವರಿಸಿದೆ

ವ್ಯಕ್ತಪಡಿಸಲು, ನನ್ನ ನೀ ದ್ವೇಷಿಸಿದೆ

ಮರೆಯುವ ಪ್ರಯತ್ನದಿ, ನನ್ನ ಮನ ಸೋತಿದೆ

ನನ್ನ ದೂರ ತಳ್ಳಿ ನೀನು, ನಗುತ್ತಲೇ ಇರುವೆ

ನಿನ್ನ ಪ್ರೀತಿ ಸಿಗದೆ ನಾನು, ಅಳುತ್ತಲೇ ಇರುವೆ

ಮುಖವಾಡ ಹಾಕುವುದು, ನಾ ಕಲಿಯುತ್ತಿರುವೆ

ನನ್ನ ನೋವು ಯಾರಿಗೂ, ಕಾಣದಂತೆ ಅಡಗಿಸಿರುವೆ

ಎಲ್ಲಾ ಭಾವನೆಗಳು ಈಗ, ಕವಿತೆಗೆ ಸೀಮಿತವಾಗಿದೆ

ಎಷ್ಟೇ ಬರೆದರೂ ಮತ್ತೆ, ವಿರಹ ಗೀತೆಯೆ ಮೂಡಿದೆ

ನನ್ನ ನೋವು ತಿಳಿಸಲು, ಕೆಲವು ಪದಗಳೇ ಸಾಲುತ್ತಿದೆ

ಅದೇ ಶಬ್ದಗಳ ಸಮ್ಮಿಲನದಿ, ಹೊಸ ಕವಿತೆ ಮೂಡುತ್ತಿದೆ

- ಕೆಕೆ (ಕೀರ್ತನ್ ಕೆ)