ಒಲಿದು ಬಾ ಶಾರದೆ, ನಾಲಿಗೆಯಲ್ಲಿ ನಲಿದು

ಒಲಿದು ಬಾ ಶಾರದೆ, ಸ್ವರಗಳಲ್ಲಿ ಹರಿದು llಪll

ರಾಗಗಳ ಜ್ಞಾನವಾಗಿ ಬಾ, ತಾಯೇ ನೀನು

ತಾಳಗಳ ತಿಳಿಸಿ ಹೇಳು ಬಾ

ಗಮಕಗಳ ನಡುವೆ ನೀನು ಬಾ, ತಾಯೇ ನೀನು

ಭಾವಗಳ ಬೆಸೆಯಲು ಹೊರಗೆ ಬಾ

ತಂಬೂರದಲ್ಲಿ ಮೂಡಿ ಬಾ, ತಾಯೇ ನೀನು

ಶ್ರುತಿಯ ಜೊತೆಯಲ್ಲೇ ಇರಲು ಬಾ

ಕೊಳಲಿನಿಂದ ನುಸುಳಿಕೊಂಡು ಬಾ, ತಾಯೇ ನೀನು

ಆಲಿಸುವ ಕಿವಿಗಳ ತೂರಿ ಬಾ

ವೀಣೆ ತಂತಿಯ ಕಂಪನದಲ್ಲಿ ಬಾ, ತಾಯೇ ನೀನು

ನಾದದಲ್ಲೇ ಧ್ಯಾನ ಮಾಡು ಬಾ

ಕಂಠದಲ್ಲೇ ವಾಸ ಮಾಡು ಬಾ, ತಾಯೇ ನೀನು

ಹಾಡಿನಲ್ಲೇ ನಾಟ್ಯ ಆಡುತ್ತ ಬಾ

-ಕೆಕೆ (ಕೀರ್ತನ್ ಕೆ)