ಎತ್ತ ಸಾಗುತ್ತಿದೆ ನನ್ನ ಪಯಣ
ಅರ್ಥವಾಗುತ್ತಿಲ್ಲ ನನ್ನ ಚಲನವಲನ
ಒಮ್ಮೊಮ್ಮೆ ಮೂಡುವುದು ಹುಸಿ ಕೋಪವು
ಇನ್ನೊಮ್ಮೆ ಆಗುವುದು ಅತಿ ದುಃಖವು
ಕೆಲವೊಮ್ಮೆ ಗಾಢ ಮೌನದ ಆಲಿಂಗನವು
ಎತ್ತ ಸಾಗುತ್ತಿದೆ ನನ್ನ ಪಯಣ
ಅರ್ಥವಾಗುತ್ತಿಲ್ಲ ನನ್ನ ಚಲನವಲನ
ಒಮ್ಮೆ ಬದುಕಾಗುವುದು ಶಾಂತ ಸಾಗರವು
ಮರುಕ್ಷಣ ಜೀವ ನುಂಗುವುದು ದೈತ್ಯ ಅಲೆಯು
ಆದರೂ ಬಿಡಲಾಗುತ್ತಿಲ್ಲ ಬದುಕಿನ ಆಸೆಯು
ಎತ್ತ ಸಾಗುತ್ತಿದೆ ನನ್ನ ಪಯಣ
ಅರ್ಥವಾಗುತ್ತಿಲ್ಲ ನನ್ನ ಚಲನವಲನ
ಆಗೊಮ್ಮೆ ಮೂಡುವುದು ಮಂದಹಾಸವು
ಮತ್ತೆ ಆಗುವುದು ನಿಂತಂತೆ ನನ್ನ ಶ್ವಾಸವು
ಏತಕೋ ಅರಿಯೆ ಕಳೆದುಹೋಗಿದೆ ನನ್ನ ಬದುಕಿನ ಪ್ರಾಸವು
ಎತ್ತ ಸಾಗುತ್ತಿದೆ ನನ್ನ ಪಯಣ
ಅರ್ಥವಾಗುತ್ತಿಲ್ಲ ನನ್ನ ಚಲನವಲನ
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!