ನಾ ಬರೆಯುವೆ ಕವಿತೆಗಳ
ಹರಿಸಿ ಭಾವ ಸಾಗರದಿ ಅಲೆಗಳ
ನಾಲ್ಕು ಗೋಡೆಗಳ ಮಧ್ಯೆ
ನಡೆಯುತ್ತಿದೆ ಒಂಟಿತನದ ಯುದ್ಧ
ಹಿಡಿದೆ ಹೊತ್ತಿಗೆಯ ಗುರಾಣಿ
ಖಡ್ಗದ ಲೇಖನಿ ಹೋರಾಡಲು ಸಿದ್ಧ
ಗೋಡೆ ಕಿಟಕಿಯ ಹೊರಗಿನಿಂದ
ಸುರಿಯುತ್ತಿದೆ ಹರ್ಷದಿ ವರ್ಷಧಾರೆ
ಮನದ ಕಣ್ಣ ಕಿಟಕಿಯಿಂದ
ಜಾರುತ್ತಿದೆ ದುಃಖದಿ ಕಣ್ಣ ನೀರೆ
ಸ್ನೇಹ ಸಂಬಂಧಗಳ ಹೆಸರಿನಲ್ಲಿ
ಇರುವರನೇಕ ಜನ ಹೊರಗೆ
ನೈಜ ಪ್ರೇಮದ ಕೊರತೆಯಲ್ಲಿ
ಆಗಿದೆ ಶೂನ್ಯವು ಮನದೊಳಗೆ
ಗುರಿ ಅಲ್ಲದ ಗುರಿಯ
ಬೆನ್ನತ್ತಿ ಹೋದೆ ನಾನಾಗ
ಗುರಿ ಗುರುವೆರಡೂ
ದೂರಾಯಿತು ನನ್ನಿಂದ ಈಗ
ಸೋಲಬೇಕಿದೆ ನಾನಿಂದು
ಹಿಡಿದರೂ ಈ ಲೇಖನಿಯ ಖಡ್ಗವ
ದೂರಾಗುತ್ತಿರುವ ಆಶಾಕಿರಣ
ಆವರಿಸುತ್ತಿದೆ ಕತ್ತಲೆಯ ಕಾರ್ಮೋಡವ
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!