ಜಾಲತಾಣಗಳ ಜಾಲದಲ್ಲಿ 

ಸಿಲುಕಿದೆ ಸಮಾಜ ಇದರಲ್ಲಿ 

ಒಳಿತು ಕೆಡಕುಗಳೆರಡೂ ಇದೆ ಅಲ್ಲಿ 

ಅರಿಯದೇ ಉಪಯೋಗಿಸಿದರೆ ಬೆಲೆ ತೆರಬೇಕಾದೀತು ನಾವಿಲ್ಲಿ 

 

ಮೈ ಬೆವರಿಳಿಸುವ ಆಟವ ಮರೆತೆವು 

ಆನ್ಲೈನ್ ನ ಆಟಕ್ಕೆ ಶರಣಾದೆವು

ಶುರುವಾಯಿತು ವಿವಾಹ ಆನ್ಲೈನ್ನಲ್ಲೇ 

ಮುಂದೆ ಕೊಡುವರು ವಿಚ್ಛೇದನವೂ ಅದರಲ್ಲೇ 

 

ಹಲವಾರು ಸ್ನೇಹಿತರು ಫೇಸ್ಬುಕ್ಕಿನಲ್ಲಿ 

ಎಲ್ಲಾ ಅಪರಿಚಿತರು ವಾಸ್ತವದಲ್ಲಿ 

ಶಿವಶಂಕರ ಬಂದರು ಧರೆಗೆ 

ಆಗುವ ಕಿಂಕರ ಫೇಸ್ಬುಕ್ಕಿನ ದೊರೆಗೆ 

 

ಊಟಕ್ಕೂ ಬಿಡುವಿಲ್ಲ ಕೈಗೆ

ಬ್ಯುಸಿಯಾಗಿರುವುದು ವಾಟ್ಸಾಪ್ ನ ಮೆಸೇಜಿಗೆ 

ನಗು ಅಳುವಿನ ವಿನಿಮಯ ನಡೆದಿರುವುದದರೊಳಗೆ 

ಆಗುವರೇನೋ ಈ ಮನುಜರು ರೋಬೋಟ್ ಗಳ ಹಾಗೆ 

 

ಪಾರ್ಲಿಮೆಂಟನ್ನು ಬಿಟ್ಟಿಲ್ಲ ಈ ವಾಟ್ಸಾಪ್ನ ಗೀಳು 

ಏನು ನೋಡುವವರು ಆ ರಾಜಕಾರಣಿಗಳನ್ನೇ ಕೇಳು 

ಆದರೂ ಕೃತಜ್ಞತೆ ಈ ಜಾಲತಾಣಕ್ಕೆ

ಈ ಕವನ ಹಂಚಿಕೊಳ್ಳಲು ಸಹಾಯ ಮಾಡಿದ್ದಕ್ಕೆ

 

-ಕೆಕೆ (ಕೀರ್ತನ್ ಕೆ)