ಕಾಣದ ಮನಸ್ಸಿನ 

ವ್ಯಾಕುಲ ಸ್ಥಿತಿಗೆ 

ಕಾಣುವ ಕಣ್ಣೇ 

ಸೋರುವ ಮಳಿಗೆ 

 

ಝರಿ ಝರಿಯಂತೆ 

ಸುರಿದಿದೆ ಹನಿಯೂ

ಮಡುಗಟ್ಟಿದೆ 

ಮನಸ್ಸಿನ ಧ್ವನಿಯೂ 

 

ಆಕ್ರಂದನವು 

ಆಕಾರವ ಪಡೆದು 

ಸೇರಿದೆ ಪದವು 

ತನುವನ್ನು ಕಡೆದು 

 

ಬೇಡುವೆ ನಿನ್ನ 

ಕೈಯನ್ನು ಮುಗಿದು 

ನೀಡೆಯ ಪ್ರೇಮವ 

ಕೋಪವ ತೊರೆದು 

 

- ಕೆಕೆ (ಕೀರ್ತನ್ ಕೆ)