ಏಕಾಂಗಿ ಪಯಣದಲ್ಲಿ

ಸುಡುವ ಬಿಸಿಲಿನಡಿಯಲ್ಲಿ

ಜೀವವಿರದ ರಸ್ತೆಯಲ್ಲಿ

ಗುರಿಯನರಸಿ ದಣಿದಿರುವೆ ನಾನಿಲ್ಲಿ

ಹಸಿರು ತುಂಬಿದ ಮರದಲ್ಲಿ

ಅಡಗಿ ಕುಂತ ಗಿಳಿ ಅಲ್ಲಿ

ಹೇಳುತ್ತಿದೆ ನನಗಿಲ್ಲಿ

ವಿರಮಿಸಲು ಮರದ ನೆರಳಿನಲ್ಲಿ

ನಾನು ಪ್ರೇಮ ನೋವಿನಲ್ಲಿ

ಮರೆತ ಗುರಿಯ ಕುರುಹು ಎಲ್ಲಿ

ತಿಳಿಸುವವರು ನನಗೆ ಯಾರಿಲ್ಲಿ

ಅಳುತ್ತ ಕಣ್ಣು ಮಂಜಾಯಿತು ತೇವದಲ್ಲಿ

ನನ್ನ ಕಣ್ಣ ಹನಿಯಲ್ಲಿ

ಮೂಡಿತು ಗಿಳಿಯ ಬಿಂಬವಲ್ಲಿ

ಹಾರಿ ಕುಂತು ಭುಜದಲ್ಲಿ

ಮುತ್ತ ಅಚ್ಚು ಒತ್ತಿತು ನನ್ನ ಕೆನ್ನೆಯಲ್ಲಿ

ಆಡಿತೊಂದು ಮಾತು ಕಿವಿಯಲ್ಲಿ

ತುಂಬಿತು ಚೈತನ್ಯವ ಮನದಲ್ಲಿ

ಉರಿಯಿತು ಜ್ಞಾನ ಬೆಂಕಿ ಆತ್ಮದಲ್ಲಿ

ಓ ನಾ ಕುಳಿತಿರುವುದೇ ಬೋಧಿವೃಕ್ಷದಡಿಯಲ್ಲಿ

- ಕೆಕೆ (ಕೀರ್ತನ್ ಕೆ)