ಮೌನವ ಅರಿಯದೆ, ಹೋದೆ ನೀನು

ಮಾತನ್ನು ಆಡಲು, ಆಗದವ ನಾನು

ಒಳಗೊಳಗೇ ಬೇಸರಿಕೆ

ಏಕಾಂತದಿ ಕನವರಿಕೆ

ಆಗದಿನ್ನೂ ಮನವರಿಕೆ

ನೀನು ಸಿಗದೇ, ಸಂತೋಷವು,

ಒಡೆದ ಹೃದಯದಿ ಸೋರಿಕೆ!

ನೆನಪಲ್ಲಿ ನಿನ್ನ ಇರುವಿಕೆ

ಇಷ್ಟೇ ನನ್ನ ಹಣೆಬರಹಕೆ

ಕಟ್ಟಿದ್ದ ಕನಸ ಗೋಪುರಕೆ

ನೀನು ಬರದೆ, ಸಂಭ್ರಮವು,

ಆಗಿದೆ ಈಗ ಮರೀಚಿಕೆ!

ನನ್ನ ಪ್ರೇಮ ಪುಸ್ತಕಕೆ

ನಿನದೊಂದೇ ಶೀರ್ಷಿಕೆ

ಬರೆದಷ್ಟೂ ಇದೇ ಸಂಚಿಕೆ

ಪ್ರೇಮ ಸಿಗದೆ, ದುಃಖವು,

ಪದಗಳಾಗಿ ಕಡತ ಸೇರುವಿಕೆ!

-ಕೆಕೆ (ಕೀರ್ತನ್ ಕೆ)