ಜಡೆಯನ್ನು ಬಿಚ್ಚಿದ
ಡಮರುಗ ಕುಟ್ಟಿದ
ತ್ರಿಶೂಲ ಹಿಡಿದು ನಾಟ್ಯ ಮಾಡುತ್ತಿರುವ ರುದ್ರನು
ಮೂರನೆ ಕಣ್ಣನ್ನು ತೆರೆದ
ಮೈಯಿಗೆ ವಿಭೂತಿ ಬಳಿದ
ಕ್ರೋದಗ್ನಿಯ ಜ್ವಾಲೆ ಪಸರಿಸುತ್ತಿರುವ ರುದ್ರನು
ಶಾಂತ ಶಿವನು ಈಗ ಕೆರಳಿದನೋ
ರೌದ್ರ ರೂಪದ ರುದ್ರ ಆಗಿಹನೋ
ಬಾ ಬಾರೋ ಮೃತ್ಯುಂಜಯ ಬೇಗ ಬಾರೋ
ಈ ಮೋಸ ಅನ್ಯಾಯವ ಕೊನೆ ಮಾಡು ಬಾರೋ
ನೊಂದಿರುವ ಮುಗ್ಧ ಜನರು
ಕೂಗುತ್ತಿರುವರು ನಿನಗೆ
ಹಿಂದೆ ಮುಂದೆ ಯೋಚಿಸದೆ
ನೀ ಹೋಗೋ ಅವರ ಬಳಿಗೆ
ಕಣ್ಣ ನೀರು ವರೆಸು, ನೀ ಕೈಯ ಹಿಡಿದು ನಡೆಸು
ನಿನ್ನ ನಂಬಿಕೊಂಡ ಬಾಳು ವ್ಯರ್ಥವಾಗದೆಂದು ತಿಳಿಸು
ಈ ಭೂಮಿಯಲ್ಲಿ ಹೆಚ್ಚಿದೆ
ದುಷ್ಟ ಜನರ ಹಾವಳಿ
ನೀನು ಬಂದೆ ಮಾಡಬೇಕು
ಅವರ ರಕ್ತದೋಕುಳಿ
ಧರ್ಮವನ್ನು ಉಳಿಸು, ಶಾಂತಿಯನ್ನು ಕರುಣಿಸು
ನಿನ್ನಯ ಇರುವಿಕೆ ಈ ಲೋಕಕೆಲ್ಲ ತೋರಿಸು
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!