ಯಾರಿವಳು? ನನ್ನವಳು!

ಯಾರಿವಳು? ನನ್ನವಳು!

ಬಳುಕಾಡುವ ಲತೆ ಇವಳು

ಹರಿದಾಡುವ ಝರಿ ಇವಳು

ನಡೆದಾಡುವ ನಾಗಕನ್ನಿಕೆಯೇ ಇವಳು

ಮಾತಿನಲ್ಲಿ ಕವಿ ಇವಳು

ನೋಟದಲ್ಲಿ ಕೋಲ್ಮಿಂಚಿವಳು

ಕರುಣೆಯಲ್ಲಿ ಧರೆಯನ್ನೂ ಮೀರಿಸೋ ಹೆಣ್ಣಿವಳು

ನಗುವಿನಲ್ಲಿ ಮಗು ಇವಳು

ಮಿಡಿತದಲ್ಲಿ ನುಡಿ ಇವಳು

ಸ್ನೇಹ ಸುರಿಸುವ ಸೋನೆಯೇ ಇವಳು

ಸಂಪಿಗೆಯ ಕಂಪಿವಳು

ಗುಲಾಬಿಯ ಕೆಂಪಿವಳು

ಬಲು ಮೋಹಕವಾದ ಮಲ್ಲಿಗೆಯೇ ಇವಳು

ನನ್ನ ಹೃದಯ ಕದ್ದ ಕಳ್ಳಿ ಇವಳು

ಪ್ರೇಮ ಸಾಮ್ರಾಜ್ಯದ ರಾಣಿ ಇವಳು

ಮನೆಯನ್ನು ಬೆಳಗೋ ದೀಪಾರತಿಯೇ ಇವಳು

- ಕೆಕೆ (ಕೀರ್ತನ್ ಕೆ)