ಸುತ್ತೆಲ್ಲ ನೆರೆಯಾಗಿದೆ
ಬದುಕೀಗ ಹೊರೆಯಾಗಿದೆ
ಮೋಡಗಳು ಕವಿದು
ಬೆಳಕನ್ನು ತಡೆದು
ಮಳೆಯಾಗಿ ಸುರಿದು
ಮಿತಿಮೀರಿ ಹರಿದು
ಸುತ್ತೆಲ್ಲ ನೆರೆಯಾಗಿದೆ
ಬದುಕೀಗ ಹೊರೆಯಾಗಿದೆ
ಮರಗಳನ್ನು ಕಡಿದು
ನೆಲವನ್ನು ಬಗೆದು
ಮಣ್ಣನ್ನು ತೆಗೆದು
ಶಕ್ತಿಯನ್ನು ಕಸಿದು
ಸುತ್ತೆಲ್ಲ ನೆರೆಯಾಗಿದೆ
ಬದುಕೀಗ ಹೊರೆಯಾಗಿದೆ
ಗುಡ್ಡಗಳು ಕುಸಿದು
ಬಲಿಯನ್ನು ಪಡೆದು
ಭಯವಿನ್ನೂ ಬೆಳೆದು
ದಾರಿಯಲ್ಲ ಅಳಿದು
ಸುತ್ತೆಲ್ಲ ನೆರೆಯಾಗಿದೆ
ಬದುಕೀಗ ಹೊರೆಯಾಗಿದೆ
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!