ವಿಕೋಪದಲ್ಲಿ ಇದೆ ಈ ಪ್ರಕೃತಿಯು!
ಪರೀಕ್ಷೆಯಲ್ಲಿ ಗೆಲ್ಲುವುದೇ ಮಾನವೀಯತೆಯು?
ನೆರೆ ಊರು ನೆರೆ ರಾಜ್ಯ ನೆರೆಯಲ್ಲಿ ಮುಳುಗಿರಲು
ನೆರವಿಗೆ ಧಾವಿಸುವವರು ಎಷ್ಟು ಜನ?
ಇರುವ ಸೂರು ಕಳೆದುಕೊಂಡು ಬೀದಿಯಲ್ಲಿ ಬಂದಿರಲು
ಕನಿಕರಿಸಿ ಕೈ ಹಿಡಿಯುವವರು ಎಷ್ಟು ಜನ?
ಶಿಕ್ಷೆಯೋ! ಪರೀಕ್ಷೆಯೋ!!
ತಿಳಿಯದು ನಿಸರ್ಗದ ನೀಲನಕ್ಷೆಯು!!!
ಬೆವರು ಹರಿಸಿ ಬೆಳೆದಂತ ಕೃಷಿ ಕೊಚ್ಚಿ ಹೋಗಿರಲು
ಕರುಣೆಯಲ್ಲಿ ಅನ್ನ ನೀಡುವವರು ಎಷ್ಟು ಜನ?
ದಣಿವರಿಯದೆ ದುಡಿದು ಮಾಡಿಟ್ಟ ಆಸ್ತಿ ಅಳಿದಿರಲು
ಅಳುವ ಕಣ್ಣ ನೀರು ಒರೆಸುವವರು ಎಷ್ಟು ಜನ?
ಶಿಕ್ಷೆಯೋ! ಪರೀಕ್ಷೆಯೋ!!
ತಿಳಿಯದು ನಿಸರ್ಗದ ನೀಲನಕ್ಷೆಯು!!!
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!