ಹರಡಿದೆ ನಮ್ಮಯ ಪ್ರೇಮ ವದಂತಿ
ಕೋಪಿಸಿಕೊಳ್ಳದೆ ಕೇಳು ನನ್ನ ವಿನಂತಿ
ಅತಿಯಾಗಿ ಪ್ರೀತಿಸುವೆನು ನಾನು... ನಿನ್ನನು
ಸ್ವೀಕರಿಸಿ ಜೊತೆಯಾಗು ನೀನು... ನನ್ನನು
ನನ್ನ ಮನಸಲ್ಲಿ ಪ್ರೇಮ ದೇವತೆ ನೀನಾದೆ
ನಿನ್ನ ಧ್ಯಾನದಿ ಬೇರೆಲ್ಲ ಮರೆತು ಹೋದೆ
ಮೌನದಲ್ಲೇ ನಾನಿನ್ನ ಪೂಜಿಸುವ ರೀತಿಗೆ
ಒಲಿಯುವ ಯೋಚನೆ ಬೇಗ ಬಾರದೆ ನಿನಗೆ
ಭಾವ ನದಿಯೀಗ ತುಂಬಿ ಹರಿದಿದೆ
ಪ್ರೀತಿ ಪದಗಳನ್ನು ಹೊತ್ತು ಸಾಗಿದೆ
ಸಾಗರವ ಸೇರುವ ನದಿಯ ತುಡಿತದ ಹಾಗೆ
ಮಿಲನದ ತವಕವು ಇದೆ ಒಲವ ಬಯಕೆಗೆ
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!