ಈಗೀಗ ಬರೆಯಲಾಗುತ್ತಿಲ್ಲ
ಒಂದು ಕವಿತೆಯ ಸಾಲು
ಹುಡುಕುತ್ತ ಹೋದೆ ತಿಳಿಯಲು
ನನ್ನ ಮುಂದಿರುವ ಸವಾಲು
ಪದಗಳ್ಯಾಕೋ ಮುನಿಸಿಕೊಂಡಿವೆ
ನಾನೆಷ್ಟೇ ಪ್ರೀತಿ ತೋರಿಸಿದರೂ
ಬತ್ತಿ ಹೋಗಿದೆ ಭಾವ ಭಾಗೀರಥಿ
ಈ ಜಡಿ ಮಳೆ ಸುರಿಯುತ್ತಿರಲೂ
ಅಕ್ಷರಗಳು ಹಾರುತ್ತಿವೆ ಕೈಗೆ ಸಿಗದೆ
ಹಿಡಿಯಲು ಹೋದೆ ನಾ ಅದರ ಕಡೆಗೆ
ಹರಿದೋಗುತ್ತಿದೆ ಶಾಹಿ ಸಾಮರಸ್ಯ ಕಾಣದೆ
ಎಷ್ಟು ಗೀಚಿದರೂ ಒಂದು ಪದ್ಯ ಮೂಡದೆ
ಬಿಳಿ ಹಾಳೆಗೆ ಒಂದೂಳ್ಳೆ ಕವನದ ಶೃಂಗಾರವಿಲ್ಲ
ಸಾಧಾರಣ ಕವಿತೆಯ ತೊಡಿಸಲೂ ನನ್ನಿಂದಾಗುತ್ತಿಲ್ಲ
ಕಲ್ಪನೆಗೆ ಏನು ಕೆಡುಕು ಬಂದಿದೆಯೋ ತಿಳಿಯುತ್ತಿಲ್ಲ
ಕವಿ ಮನಸ್ಸು ಮಂಕಾಗಿ ಮರುಗುತ್ತಿದೆಯಲ್ಲ
-ಕೆಕೆ(ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!