ಬೀಳುತ್ತಾ ಏಳುತ್ತಾ ಸಾಗುವುದೇ ಈ ಜೀವನ
ಸೋತರೂ ಗೆದ್ದರೂ ನಗುವಿರಲಿ ಓ ಮಾನವ
ಗುರಿ ಕಡೆ ಪಯಣ ಸಾಗುತ್ತಿರಲಿ
ಏನೇ ಆದರೂ ನಿಲ್ಲದೆ
ಎಲ್ಲರ ಮೇಲೂ ಕನಿಕರವಿರಲಿ
ಮಾನವೀಯತೆ ಮರೆಯದೆ
ಮೇಲು ಕೀಳೆಂಬ ಯೋಚನೆಯ
ತೆಗೆದು ಹಾಕು ಮನಸ್ಸಿಂದ
ಎಲ್ಲ ಜೊತೆಯಾಗಿ ಸಾಗಲೇಬೇಕು
ಆಗಲೇ ಅದು ಚೆಂದ
ಕಷ್ಟ ಸುಖಗಳೇನೇ ಬಂದರೂ ಬರಲಿ
ಇರು ನೀನು ನಂಬಿಕೆ ಬಿಡದೆ
ಅಸಹಾಯಕತೆಯು ತುಂಬಿರುವುದು ಜಗದಲ್ಲಿ
ನೀನಾಗು ಸ್ಫೂರ್ತಿಯು ತಡಮಾಡದೆ
ಎಲ್ಲ ನನ್ನವರು ಎಂಬ ಭಾವನೆಯ
ತುಂಬಿಕೊ ನೀನು ಮನದ ತುಂಬ
ನಗಿಸಿ ನಗುತ ಬದುಕುವ ಕಲೆಯ
ಕಲಿತರೆ ಒಡೆಯುವುದು ದುಃಖದ ಕಂಬ
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!