ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಜನಪ್ರಿಯ, ಸೃಜನಶೀಲ ನಿರ್ದೇಶಕ ಟಿ ಎನ್ ಸೀತಾರಾಂರವರ ಸಂದರ್ಶನ. ರಂಗಭೂಮಿ ಹಿನ್ನೆಲೆಯಿಂದ ಬಂದ ಸ್ಪಷ್ಟ ರಾಜಕೀಯ ನಿಲುವುಗಳನ್ನು ಹೊಂದಿರುವ ಸೀತಾರಾಂ ಒಂದು ಸುಖೀ ಸಮಾಜದ ಕನಸನ್ನು ಹೊತ್ತವರು. ಅವರ ಈ ಆದರ್ಶವೇ ಅವರ ಕೃತಿಗಳ ಸಾಮಾಜಿಕ ಕಾಳಜಿಗಳ ಪ್ರೇರಣೆ. ರಂಗಭೂಮಿಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದ ಅವರು ಮಾಯಾಮೃಗ, ಮನ್ವಂತರಗಳಂಥ ಯಶಸ್ವೀ ಧಾರಾವಾಹಿಗಳಲ್ಲಿ ಕಿರುತೆರೆಗೂ ಸೀತಾರಾಂ ಶೈಲಿಯನ್ನು ಪರಿಚಿಯಿಸಿದರು. ಗಂಭೀರ ರಂಗಪ್ರಯೋಗಗಳಲ್ಲಿ ತೊಡಗಿಕೊಂಡವರು ಜನಪ್ರಿಯ ಮಾಧ್ಯಮಗಳನ್ನು ಕೈಗೆತ್ತಿಕೊಂಡಾಗ ಸೋಲುತ್ತಾರೆ ಎಂಬುದನ್ನೂ ಸೀತಾರಾಂ ಸುಳ್ಳು ಮಾಡಿದರು. ಮೊದಲೆರಡು ಧಾರಾವಾಹಿಗಳ ಯಶಸ್ಸಿನಾಚೆಗೆ ಅವರ `ಮುಕ್ತ' ಸಾಗಿದೆ. ಮೆಗಾ ಧಾರಾವಾಹಿಗಳ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಅವರು ಇತ್ತೀಚೆಗೆ ಎರಡು ಚಲನಚಿತ್ರಗಳನ್ನು ಪ್ರಕಟಿಸಿದ್ದಾರೆ. ಈ ಸಮಯದಲ್ಲಿ ಸಂಪದದ ಕೆಲ ಪ್ರಮುಖ ಸದಸ್ಯರು ಸೀತಾರಾಂರವರ ಸಂದರ್ಶನ ಮಾಡಬೇಕು ಎಂದು ಬಹಳ ಹಿಂದೆಯೇ ಆಲೋಚಿಸಿದ್ದರು, ಆದರೆ ಸಾಧ್ಯವಾಗಿದ್ದು ಹಲವು ತಿಂಗಳುಗಳ ನಂತರವೇ.
ಪ್ರತೀ ಬಾರಿಯೂ ಸಂದರ್ಶನ ನಡೆಸಲು ಹೋಗುವವರಷ್ಟೇ ಪ್ರಶ್ನೆಗಳನ್ನು ಸಿದ್ಧ ಪಡಿಸಿಕೊಂಡು ಕೇಳುತ್ತಿದ್ದರು. ಈ ಬಾರಿ ಸಂಪದ ಬಳಗದ ಸದಸ್ಯರಿಂದ ಪ್ರಶ್ನೆಗಳನ್ನು ಆಹ್ವಾನಿಸಿ ಅವುಗಳಿಗೂ ಉತ್ತರ ಪಡೆಯಲು ಪ್ರಯತ್ನಿಸಿದ್ದೇವೆ. ಸಮಯದ ಅಭಾವ ಮುಂತಾದ ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಆದರೆ ನಮ್ಮ ಮಿತಿಯೊಳಗೆ ಒಳ್ಳೆಯದನ್ನು ನೀಡುವ ನಮ್ಮ ಪ್ರಯತ್ನ ವಿಫಲವಾಗಿಲ್ಲ ಎನಿಸುತ್ತಿದೆ. ಇದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ನೀವೇ ತಿಳಿಸಬೇಕು.
ಸಂಪದ ಪಾಡ್ಕಾಸ್ಟ್ನ 6ನೇ ಸಂಚಿಕೆಗೆ ನಿಮಗೆಲ್ಲ ಸ್ವಾಗತ . ಇವತ್ತು ನಮ್ಮ ಜೊತೆ ಅತಿಥಿಯಾಗಿರುವವರು ಮುಕ್ತ, ಮಾಯಾಮೃಗ, ಮನ್ವಂತರ, ಮತ ದಾನಗಳ ಮೂಲಕ ಕರ್ನಾಟಕದ ಮನೆ ಮನಗಳನ್ನ ತಲುಪಿರುವಂತಹ ಟಿ.ಎನ್.ಸೀತಾರಾಂರವರು . ಅವರ ಜೊತೆ ನಮ್ಮ ಮಾತುಕತೆ. ನಮಸ್ಕಾರ ಟಿ.ಎನ್.ಸೀತಾರಾಂರವರೆ. ನಿಮ್ಮನ್ನ ನಾನು ಸಂಪದ ಪಾಡ್ಕಾಸ್ಟ್ನ 6ನೇ ಸಂಚಿಕೆಗೆ ಸ್ವಾಗತಿಸುತ್ತಿದ್ದೇನೆ
ಕನ್ನಡದಲ್ಲಿ ಕನ್ನಡತನ ತುಂಬಿಕೊಂಡಿರುವಂತಹ ಧಾರಾವಾಹಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಎಲ್ಲವೂ ಹಿಂದಿ ಅಥವಾ ತಮಿಳು ಪಡಿಯಚ್ಚುಗಳಂತೆ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ನಿಮ್ಮ ಎಲ್ಲ ಧಾರಾವಾಹಿಗಳಲ್ಲು ಕನ್ನಡತನ ಅನ್ನೋದು ತುಂಬಿಕೊಂಡಿದೆ.ಮತ್ತು ಕನ್ನಡದ ಮಣ್ಣಿನ ವಾಸನೆ ಸಾಕಷ್ಟು ತುಂಬಿಕೊಂಡಿದೆ. ನಿಮ್ಮ ಯಶಸ್ಸಿನ ರಹಸ್ಯ ಇದುವೇ ಅಂತ ಭಾವಿಸ್ತೇನೆ. ಇದು ನಿಜವೇ?
ಉತ್ತರ
ಇದೂ ಇರಬಹುದು. ಇದೊಂದೇ ಅಲ್ಲ.
ಪ್ರಶ್ನೆ ೨
ಹಾಗಾದ್ರೆ ನಿಮ್ಮ ಯಶಸ್ಸಿನ ರಹಸ್ಯ ಏನಂತೇಳ್ತೀರಿ?
ಉತ್ತರ
ಬದುಕಿನ ನೇರವಾದ ಸಮಸ್ಯೆಗಳ ಜೊತೆ, ಬದುಕಿನ ನೇರವಾದ ಪಾತ್ರಗಳ ಜೊತೆ ಕತೆಯನ್ನ ಗುರುತಿಸಿಕೊಳ್ಳುವ ಹಾಗೆ ಮಾಡಿ, ಕತೆಯನ್ನ ನಿಜವಾದ ಪಾತ್ರಗಳ ಜೊತೆ, ಒಂದು ಐಡೆಂಟಿಕಲ್ ಮಿಡ್ಲ್ ಕ್ಲಾಸ್ ಐಡೆಂಟಿಫಿಕೇಷನ್. ಆ ತರಹದ ಕತೆಯನ್ನ ರೂಪಿಸೋದ್ರಿಂದ ಎಲ್ರಿಗೂ ಇದು ತಮ್ಮದೇ ಆದ ಕತೆ ಅನ್ನಿಸಬಹುದು. ಆಗಾಗಿ ಅದು ಪ್ರಾಯಶಹ ಹೆಚ್ಚಿನ ಕಾಂಟ್ರಿಬ್ಯೂಶನ್ ಕೊಡ್ತಾ ಇದೆ ಅನ್ಸತ್ತೆ. ಜೊತೆಗೆ ಪಾತ್ರಧಾರಿಗಳ ಆಯ್ಕೆ ಇರುತ್ತಲ್ವಾ ಆ ಪಾತ್ರಗಳು ಅದಕ್ಕೆ ಸರಿಯಾಗಿರತ್ತೆ. ನಾನು ಏನನ್ನ ನಿರೂಪಿಸೋದಕ್ಕೆ ಇಷ್ಟ ಪಡ್ತೀನೋ ಆ ನಿರೂಪಣೆಗೆ ತಕ್ಕ ಹಾಗಿರತ್ತೆ.
ಅವರ ಪಾತ್ರ ಪೋಷಣೆ ಎರಡನೇದಿರಬಹುದು.
ಮೂರನೇದು ಕನ್ನಡ, ಕನ್ನಡತನ ಇರಬಹುದು. ಇವೆಲ್ಲಾ ಸೇರಿ ಹಂಗಾಗಿದೆ ಅನ್ಸತ್ತೆ. ಆಮೇಲೆ ಕತೆಗಳಲ್ಲಿ ಬೇರೆವ್ರು ಭಾವನೆಗಳ ಜೊತೆ ಮಾತ್ರ ವ್ಯವಹಾರ ಮಾಡ್ತಾರೆ ಬೇರೆ ಕತೆಗಾರರು. ಭಾವನೆಗಳಲ್ದೆ ವಿಚಾರಕ್ಕೂ ಭಾವನೆಗಳಿಗೂ ಸಂಬಂಧ ಇರತ್ತೆ ಮತ್ತು ಭಾವನೆಗಳು ವಿಚಾರಗಳ ಒಂದು ಪ್ರತಿಫಲ ಮತ್ತು ವಿಚಾರಗಳು ಭಾವನೆಗಳ ಪ್ರತಿಫಲ. ಈ ಒಂದು equation ನಲ್ಲಿ ಕೆಲಸ ಮಾಡೋದ್ರಿಂದ ಅದು ಜನಪ್ರಿಯವಾಗಿದೆ ಅನ್ಸತ್ತೆ.
ಪ್ರಶ್ನೆ ೩
ತಾವು ಈ ಕಲೆಯ ಜಗತ್ತಿಗೆ ತೆರೆದುಕೊಂಡು ಹೋರಾಟಗಳಲ್ಲಿ ಪಾಲ್ಗೊಂಡವರು. ಕರ್ನಾಟಕದಲ್ಲಿ ಸಾಕಷ್ಟು ಹೋರಾಟಗಳು ಜೀವಂತವಾಗಿದ್ರೂ ಸಾಂಸ್ಕೃತಿಕ ಜಗತ್ತು ಬಹಳ ಜೀವಂತವಾಗಿ ಲವಲವಿಕೆಯಿಂದ ಇದ್ದ ಹೊತ್ತು. ಅದೇ ಹೊತ್ತಿನಲ್ಲಿ ನಿಮ್ಮ ಅತ್ಯುತ್ತಮ ನಾಟಕಗಳು ಹೊರ ಬಂದವು. ಆದ್ರೆ ನಿಮ್ಮ ನಾಟಕಗಳಿಗೂ ಮತ್ತು ಸೀರಿಯಲ್ಗಳಿಗೂ ಅತ್ಯಂತ ವ್ಯತ್ಯಾಸವಿದೆ. ನೀವು ನಾಟಕಗಳಲ್ಲಿ ಸೂಕ್ತವಾಗಿ ಸೃಷ್ಟಿಸುವ ಪಾತ್ರಗಳನ್ನ ಸೀರಿಯಲ್ಗಳಲ್ಲಿ ಬರುವಾಗ ಬಹಳ black & white ಹೆಚ್ಚು vocal ಆಗಿರ್ತೀರಿ. ಇದು ಯಾಕೆ ಅಂತ ಕೇಳಬಹುದಾ?
ಉತ್ತರ
Black & white ಆಗಿರಲ್ಲ vocal ಆಗಿರ್ತೇನೆ. Vocal ಆಗಿ ಯಾಕಿರ್ತೇನೆ ಅಂದ್ರೆ ನಾನು ನಾಟಕಗಳಲ್ಲಿ ನಾನು ನಿರ್ದಿಷ್ಟ ಪ್ರೇಕ್ಷಕರನ್ನ ಗುರಿಯಾಗಿಟ್ಟುಕೊಂಡು ಮಾಡಿರ್ತೇನೆ. ಇದು ಎಲ್ಲಾ ಪ್ರೇಕ್ಷಕರನ್ನ ಗುರಿಯಾಗಿಟ್ಟುಕೊಂಡು ಮಾಡಿರ್ತೇನೆ. ಹಾಗಾಗಿ ನನ್ನ Appeal is louder. It is not black & While. It is louder.
ಪ್ರಶ್ನೆ ೪
ಮುಕ್ತ ಧಾರಾವಾಹಿಯನ್ನ ತಕ್ಕೋಳದಾದ್ರೆ ಮಾಳವಿಕ ಪಾತ್ರ ಎಷ್ಟು white ಆಗಿದೆಯೋ ಅದರ ವಿರುದ್ಧವಾಗಿ ಬರುವ ಪಾತ್ರಗಳು ಅಷ್ಟೇ black ಆಗಿವೆ ಅಂತ ನಿಮಗೆ ಅನ್ಸಲ್ವಾ?
ಉತ್ತರ
ಮಾಳವಿಕಾ, ರಾಣೆ ಇಬ್ರೂದೂ ಪಾತ್ರ ಹಾಗಿದೆ. ಇಂದಿರಾ ಅರುಣಾಚಲ ಮೂರ್ತಿ ನಂಜುಂಡ black & white ಅನೇಕರು ಈ ತರಹದ gray characters ತುಂಬಾ ಇದೆ. ಅದರಲ್ಲಿ black & white extreme ಒಂದು ಯಾವುದೇ ಕತೆ ನನ್ನ ಕಥೆಗಳಲ್ಲಿ ಹಾಗಿರತ್ತೆ. ಒಂದು ಎಡ್ಜ್ ನಲ್ಲಿ black ಪಾತ್ರ like ರಾಣಾ ಛಾಪ್ರೆ ಇನ್ನೊಂದು extremeನಲ್ಲಿ ತುಂಬಾ white ಬಿಳಿಯ ಪಾತ್ರ. ಇನ್ನು ಮಿಕ್ಕಿದ ಪಾತ್ರಗಳು ಸೇತುವೆಯ ಹಾಗೆ ಕೆಲಸ ಮಾಡುತ್ತವೆ. ತುಂಬಾ black ಹೆಚ್ಚಿನ white ಕಮ್ಮಿ white ಜಾಸ್ತಿ black ಈ ತರಹ ಹೊಗ್ತಾ ಹೊಗ್ತಾ ಒಂದು ನೇಯಿಗೆಯಾಗಿರತ್ತೆ. ಎಲ್ಲಾ ಪಾತ್ರಗಳನ್ನ ಗಮನಿಸಿ ನೋಡಿದ್ರೆ ಹಾಗಿರತ್ತೆ ಟೋಟಲ್ಲಾಗಿ.
ಪ್ರಶ್ನೆ ೫
ಮತ್ತೊಂದು ನೀವು ನಾಟಕಗಳಲ್ಲಿರುವ ಸೂಕ್ಷ್ಮತೆ ತಮ್ಮ ಸೀರಿಯಲ್ಗಳಲ್ಲಿ ಕಾಣಿಸ್ಲಿಲ್ಲ ಅಂತ ಹೇಳ್ಲಿಕ್ಕೆ TRP ಎಷ್ಟರ ಮಟ್ಟಿಗೆ ಕಾರಣ ಅಂತ ಕೇಳಬಹುದಾ?
ಉತ್ತರ
TRP ಅನ್ನೋದಕ್ಕಿಂತ ನಾನು ಹೆಚ್ಚು ಜನಕ್ಕೆ ಮುಟ್ಟೋದಕ್ಕೆ ಪ್ರಯತ್ನ ಪಡ್ತೀನಿ. ನಾಟಕಗಳಲ್ಲಿ ಸೂಕ್ಷ್ಮತೆ ನಿಮಗೆ ಒಂದು ಗಂಟೆ ಹೊತ್ತಿನೊಳಗಾಗಿ ನಾನು ಹೇಳಬೇಕಾದದ್ದನ್ನ ಹೇಳಿಮುಗಿಸಬೇಕಾಗತ್ತೆ. ಇದು ನಾನು ವರ್ಷಾನುಗಟ್ಟಲೆ ಹೇಳ್ತಾ ಇರಬೇಕಾಗುತ್ತದೆ. ವರ್ಷಾನುಗಟ್ಟಲೆ ಒಂದು ಸೂಕ್ಷ್ಮವಾದ ವಿಚಾರವನ್ನ ಸೂಕ್ಷ್ಮವಾಗಿ ಹೇಳ್ತಾ ಇರಕ್ಕಾಗಲ್ಲ ಅದಕ್ಕೇ ಇರಬಹುದು.
ಪ್ರಶ್ನೆ ೬
ನಾನು ಆವಾಗ್ಲೇ ನಿಮ್ಮ ಹತ್ರ ಪ್ರಶ್ನೆ ಕೇಳ್ದೆ. ತಾವು ಕಿರುತೆರೆಯಲ್ಲಿರುವಷ್ಟು comfortable ಆಗಿ ನಾಟಕಗಳಲ್ಲಿರುವಷ್ಟು comfortable ಹಿರಿ ತೆರೆಯಲ್ಲಿ ಇರ್ಲಿಲ್ಲ. ಇದು ಯಾಕೆ? ಯಾವ ಭಯ ನಿಮ್ಮನ್ನ ಕಾಡ್ತಾ ಇತ್ತು ನಿಮ್ಮನ್ನಲ್ಲಿ?
ಉತ್ತರ
ದುಡ್ಡಿನ ಭಯ. ಹಿರಿ ತೆರೆಗೆ ತುಂಬಾ ದುಡ್ಡು ಬೇಕು.ಆದ್ರೆ ಕಿರುತೆರೆಗೆ ಅಷ್ಟು ದುಡ್ಡು ಬೇಕಾಗಿಲ್ಲ. ಆಮೇಲೆ ಕಿರುತೆರೆಯಲ್ಲಿ ನನಗೆ ದುಡ್ಡಿನ ನಷ್ಟ ಆಗೋದಿಲ್ಲ. ನಾನು ಯಾರ ಕೈಯಲ್ಲಿ ದುಡ್ಡಿಸ್ಕೊಂಡು ಕೂಲಿ ಕೆಲ್ಸ ಮಾಡ್ತೀನಲ್ಲ. ಆದ್ರೆ ಕೂಲಿ ಕೆಲ್ಸ ಮಾಡೋನಿಗೆ ನಷ್ಟ ಲಾಭದ ಪ್ರಶ್ನೆ ಇರೋದಿಲ್ಲ. ಅದ್ರಲ್ಲಿ ಇನ್ನೊಬ್ಬರ ದುಡ್ಡನ್ನ ತೊಡಗಿಸಿಬಿಟ್ಟು ನಷ್ಟ ಮಾಡೋದ್ರಲ್ಲಿ ನನಗೆ ತೊಂದರೆ ಆಗತ್ತೆ. ಹಾಗಾಗಿ ಅದ್ರುದು ಕೋಟಿಗಳಲ್ಲಿ ವ್ಯವಹಾರವಾಗತ್ತೆ. ಚಿತ್ರಗಳು.ಇದ್ರಲ್ಲಿ ಆತರಹದ ಭಯ ಇರೋಲ್ಲ. ಭಯ ಇರ್ವಾಗ ನಾವು comfortable ಆಗಿ ಇರಲ್ಲ.
ಪ್ರಶ್ನೆ ೭
ಮತ್ತೊಂದು ಪ್ರಶ್ನೆ ಕೇಳ್ಬೇಕಾಗಿರೋದೇನಂದ್ರೆ ನನಗೆ ಹಿರಿ ತೆರೆಯಲ್ಲಿ ಭಯ ಇದೆ ಅಂತೇಳಿದ್ರಿ ಕೆಲವು ದಿನಗಳಿಂದಷ್ಟೇ ಎರಡು ಚಿತ್ರಗಳನ್ನ ಒಟ್ಟಿಗೇ announce ಮಾಡಿದ್ರಿ. ಇವಾಗ ನಿಮ್ಮ ಭಯದ ಪ್ರಮಾಣ ಕಡಿಮೆಯಾಗಿದೆಯೇ?
ಉತ್ತರ
ಆದ್ರೆ ನನಗೆ ಈಗ ಸ್ವಲ್ಪ ಪ್ರೇಕ್ಷಕರು ನನಗೆ individual ಆಗಿ ಜಾಸ್ತಿಯಾಗಿದ್ದಾರೆ ಅನ್ಸತ್ತೆ. ಹಿಂದೆ ನಾನು ಚಿತ್ರ ಮಾಡ್ದಾಗ ಈಗಿರುವುದಕ್ಕಿಂತ ಕಡಿಮೆ ಪ್ರೇಕ್ಷಕರಿದ್ರು. ನನಗೆ ಅಂತ ಪ್ರೇಕ್ಷಕರು ನಾನೇ ಆದ್ರಿಂದ ಆಕರ್ಷಿತರಾಗುವಂತಹ ನನ್ನ ಪ್ರೇಕ್ಷಕರು ಅಂತ ಹೇಳೋದಿಲ್ಲ. ನಾನು ಏನನ್ನ ಮಾಡ್ತೀನೋ ಅದನ್ನ ಅನುಸರಿಸುವ ಇಷ್ಟ ಪಡುವಂತಹ ಪ್ರೇಕ್ಷಕರಿರ್ತಾರೆ.ಆದ್ರೆ ನನ್ನ ಯೋಚನೆಯ ಧಾಟಿ ಅವರ ಯೋಚನೆಯ ಧಾಟಿ ಇವೆಲ್ಲಾ ಒಂದೇ ಆಗಿರಬಹುದು. ನನ್ನ taste ಅವ್ರ taste ಆ ತರಹದ ಸಂಖ್ಯೆ ಈಗ ಜಾಸ್ತಿ ಇದೆ ಮುಂಚೆಗಿಂತಲೂ. ಹಾಗಾಗಿ ಹೆಚ್ಚು comfortable ಹಾಗಾಗಿ 2 ಚಿತ್ರಗಳನ್ನ ಅನೌನ್ಸ್ ಮಾಡಿದ್ದೇನೆ.
ಪ್ರಶ್ನೆ ೮
ನೀವು ಕತೆಗಳನ್ನ ಆರಿಸಿಕೊಳ್ಳುವಾಗ ಬಹುಶಃ ನಾನು ಮೊದಲೇ ಹೇಳ್ದೆ ನಿಮ್ಮ ಎಲ್ಲಾ ಧಾರಾವಾಹಿಗಳಲ್ಲಿ ಕನ್ನಡತನ ಅನ್ನೋದಿರತ್ತೆ. ಇದು ನಿಮ್ಮ conscious ಆಯ್ಕೆಯೆ ಅಥವಾ ನಿಮ್ಮ ಕತೆಗಳ ಆಯ್ಕೆ ಅಥವಾ ಐಡಿಯಾಗಳು ರೂಪುಗೊಳ್ಳುವ ಹಂತದಲ್ಲಿ ಇದು ಬಹಳ subconscious ಲೆವೆಲ್ನಲ್ಲೇ ಆ ತರಹದ embed ಆಗಿ ಬರೋದಾ?
ಉತ್ತರ
ಅಂತರ್ಗತವಾಗಿರತ್ತೆ,ಯಾಕಂದ್ರೆ ನಾನು ಬೇರೆ ಹೆಚ್ಚಿನ ಸಂಸ್ಕೃತಿಯನ್ನ ನೋಡಿಲ್ಲ. ನಾನು ನೋಡಿರೋದೇ ಕನ್ನಡದ ಸಂಸ್ಕೃತಿಯನ್ನ. ನನ್ನ ಮಿಡ್ಲ್ ಕ್ಲಾಸ್ ಫ್ಯಾಮಿಲಿಯಿಂದ, ಮಧ್ಯಮ ವರ್ಗದ ಕುಟುಂಬದಿಂದ ಬಂದವ್ರು ಸಾಮಾನ್ಯವಾಗಿ ಅದೆ ಅಂತರ್ಗತವಾಗಿ ಕನ್ನಡತನ ಇರತ್ತೆ. ಆದ್ರೆ ನಮ್ಮ ಮನೆ ಮಾತು ತೆಲುಗು. ಮನೆ ಮಾತು ತೆಲುಗು ಆದ್ರೆ ಕನ್ನಡತನ ಭಾವ ಇರತ್ತೆ. ಬದುಕು ಹಾಗಾಗಿ ಕನ್ನಡತನ ಬದುಕಿನಲ್ಲಿರತ್ತೆ. ಅದು ಬರೀ ಭಾಷೆಯಲ್ಲಿಲ್ಲ.
ಪ್ರಶ್ನೆ ೯
ನೀವು ಪ್ರತೀ ಕತೆಗಳನ್ನ ಮಾಯಾಮೃಗ ಇರಬಹುದು ಮನ್ವಂತರ ಇರಬಹುದು ಅಥವಾ ಈಗಿನ ಮುಕ್ತಾ ಇರಬಹುದು, ಇದನ್ನ ಆರಿಸಿಕೊಳ್ಲಿಕ್ಕೆ ಹೇಗೆ ನೀವು ಇದೊಂದು ಇಷ್ಟು ಉದ್ದದ ಕತೆಯಾಗಬಹುದು ಹೀಗೆ ಜನಪ್ರಿಯ ಆಗಬಹುದಂತ ಕಲ್ಪನೆ ನಿಮ್ಮಲ್ಲಿತ್ತಾ?
ಉತ್ತರ
ಮಾಯಾಮೃಗ ಶುರು ಮಾಡ್ದಾಗ ಜನಪ್ರಿಯ ಆಗಬಹುದು ಅಂತ ಒಂದು ಊಹೆ ಇತ್ತಷ್ಟೇ. ಆಗಬಹುದೇನೋ ಅಂತ. ಮನ್ವಂತರ ಮಾಡ್ದಾಗ ಜನಪ್ರಿಯ ಆಗಬಹುದು ಅಥವಾ ಆಗ್ದೇನೇ ಇರಬಹುದನ್ನೋ ಹೆದರಿಕೆ ಇತ್ತು. ಅವೆರಡೂನೂ ಹಿಟ್ ಆಯ್ತು. ಇದು ಆಗ್ದೇನೇ ಇರಬಹುದು ಅಂತ, ಎರಡು ಮಾತ್ರ ಗೆಲ್ಲೋಕೆ ಸಾಧ್ಯ ಮೂರನೇದು ಗೆಲ್ಲೋಕೆ ಸಾಧ್ಯ ಇಲ್ಲ ಅಂತ ಬಹಳ ಹೆದರಿಸ್ತಾ ಇದ್ರು ಹಾಗಾಗಿ ಅದೂ ನಿಜವೇನೋ ಅಂತ ಬಂದಿತ್ತು. ಆದ್ರೆ conscious effort ಏನೂ ಇಲ್ಲ. ಅನ್ನಿಸಿದ್ದು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿ ಹೇಳ್ತಾ ಹೋದ್ರೆ ಇಷ್ಟ ಆಗಬಹುದು ಅನ್ನಿಸತ್ತೆ. ಮುಕ್ತ ಎಲ್ಲಾದಕ್ಕಿಂತ ಹಚ್ಚಿನ ಗೆಲುವು ಸಾಧಿಸ್ತು.
ಪ್ರಶ್ನೆ ೧೦
ಮುಕ್ತದ ಯಶಸ್ಸಿನ ಹಿಂದೆ ನೀವು ಆಗ್ಲೇ ಹೇಳಿದ್ರಿ ಒಂದು ಐಡಿಯಾ ಕನ್ಸೀವ್ ಮಾಡ್ದೆ. ಬಾಕಿದೆಲ್ಲಾ ಕತೆಗಳಾಗಿ ಕನ್ಸೀವ್ ಮಾಡ್ದೆ ಅಂತ ಅದರ ವ್ಯತ್ಯಾಸವನ್ನ ವಿವರಿಸುತ್ತೀರಾ?
ಉತ್ತರ
ಐಡಿಯಾ ಕನ್ಸೀವ್ ಮಾಡ್ದೆ ಅಂದ್ರೆ ಜನಗಳ ಜೊತೆ ಹೇಗೆ ರಿಲೇಟ್ ಆಗತ್ತೆ ಅನ್ನೋದು , ಯಾವುದೇ ಒಂದು ವಿಚಾರ ಜನಗಳ ಜೊತೆ ಹೇಗೆ ರಿಲೇಟ್ ಆಗುತ್ತೆ ಅನ್ನೊದು ಒಂದು ಟೋಟಲ್ ಮಾಡ್ದೆ. ಒಂದು ನೂರು ಜನ ಇದ್ದಾರೆ ಅಂತ ನನ್ನ ಮನಸ್ಸಿನಲ್ಲಿಟ್ಟುಕೊಳ್ತೇನೆ. ಒಂದು ವಿಚಾರ ನಾನಿಟ್ಟುಕೊಂಡೆ ಅಂದ್ಕೊಳ್ಳಿ. ಅದು ಭಾವನಾತ್ಮಕವಾಗಿ ಎಷ್ಟು ಜನಗಳ ಜೊತೆಗೆ conscious effort ಆಗಿ ಅಂದ್ರೆ 70 ಜನಕ್ಕೆ ಒಂದೇ ಸಮ ಅನ್ನಿಸಬಹುದು ಅಂದ್ಕೊಳ್ಳಿ. ಭಾವನಾತ್ಮಕವಾಗಿ ಒಂದು ವಿಚಾರದ ಬಗ್ಗೆ ಅವರ ಪ್ರತಿಕ್ರಿಯೆ, ಭಾವನಾತ್ಮಕ ಪ್ರತಿಕ್ರಿಯೆಯಲ್ಲ. ಒಂದು ವಿಚಾರಕ್ಕೆ ಭಾವನಾತ್ಮಕ ಪ್ರತಿಕ್ರಿಯೆ 70 ಭಾಗ ಇದೆ ಅಂತಿಟ್ಟುಕೊಂಡ್ರೆ ಅದ್ರಲ್ಲಿ ಅದನ್ನ ಐಡಿಯಾ ಆಗಿ ಕನ್ಸೀವ್ ಮಾಡ್ತಾ ಇದೀನಿ ಅಂತ. ಕತೆ ಅಂತ ಇಟ್ಕೊಳ್ಳಿ ನಾನು ಎಷ್ಟು ಜನರ ಕನ್ವಿನ್ಸ್ ಇದಿಯೋ ಅದು ಬೇಕಾಗಿಲ್ಲ. ಕತೆಯ ಪಾತ್ರಗಳು ಮಾತ್ರ ಅದನ್ನ ಮಾಡ್ಕೊಳ್ತವೆ. ಇಲ್ಲಿ ನಾನು ಒಂದು ವಿಚಾರ ಮತ್ತು ಭಾವನೆಯನ್ನ ಒಟ್ಟಿಗೆ ತಗೊಂಡೋಗ್ತಿರೋದ್ರಿಂದ it’s a craft ನಾನು ಒಂಥರಾ ಮ್ಯಾನೇಜ್ ಮಾಡ್ತಿರ್ತೀನಿ. ಇಲ್ಲಿ ಪಾತ್ರಗಳು ಪೂರ್ತಿ ಒಬ್ಬಂಟಿ ಮ್ಯಾನೇಜ್ ಮಾಡೊಕಾಗೊದಿಲ್ಲ. ನನ್ನ ಇದಕ್ಕೆ ಆ ಕಥೆಗೆ ಹೇಗೋ ಹಾಗೆ ಇದಾಕ್ತಾ ಹೋಗತ್ತೆ. ಇಲ್ಲಿ ನನ್ನ ವಿಚಾರ ಮತ್ತು ಭಾವಕ್ಕೆ ತಕ್ಕಹಾಗೆ ಬದಲಾಯಿಸ್ತಾ ಹೋಗ್ತೇನೆ. ಹಾಗಾಗಿ ಇದನ್ನ ಐಡಿಯಾ ಆಗಿ ಕನ್ಸೀವ್ ಮಾಡ್ದೆ ಅವನ್ನ ಕತೆಯಾಗಿ ಕನ್ಸೀವ್ ಮಾಡ್ದೆ.
ಪ್ರಶ್ನೆ ೧೧
ಜನಪ್ರಿಯತೆ ಮತ್ತು ನಿಮ್ಮಲ್ಲಿರುವ ಕಲಾವಿದ ಮತ್ತು ನಿರ್ದೇಶಕನಿಗೆ ಒಂದು ಮಿತಿಯಾಗಿ ಪರಿಣಮಿಸ್ತಾ ಇಲ್ವಾ ಅಂದ್ರೆ ಈ ಪಾತ್ರ ಹೀಗೆ ಹೋಗ್ಬೇಕು ಹೀಗೆ ಹೋದ್ರೆ ಚಂದ ಹೀಗಿರ್ಬೇಕು ಅನ್ನೋ ಒತ್ತಡ ನಿಮ್ಮ ಮೇಲಿರುತ್ತೆ, ಇದು ಒಂದು ಮಿತಿಯಾಗೆ ಕಾಣಿಸ್ತಾ ಇದೆಯಾ?
ಉತ್ತರ
ಅದು ಒಂದು ಮಿತಿಯಾಗಿ ಕಾಣಿಸೋದಿಲ್ಲ. ಅದು ಒಂದು ಸ್ಪೋರ್ಟ್ ಕ್ರೀಡೆಯಾಗಿ ಕಾಣಿಸತ್ತೆ ನನಗೆ. ಅಂದ್ರೆ I enjoyI. ಮಿತಿಯಾಗಿ ಕಾಣಿಸಿದ್ರೆ u don’t enjoy ಅದ್ರಿಂದ ನನಗೆ ಸಂತೋಷ ಆಗತ್ತೆ. ಹೀಗೆ ಮಾಡಿದ್ರೆ ಹೀಗಿರಬಹುದು. ಬೈಸಿಕೊಳ್ಳಬಹುದು ಜನಗಳ ಕೈಯಲ್ಲಿ ನೋಡೋಣ ಅಂತ ಅನ್ನೋ ಇದು ಇರತ್ತೆ. ಬೈಸಿಕೊಳ್ದೇನೇ ಇರಬಹುದು ಪ್ರಿಯವಾಗ್ಬಹುದು ಆತರಹ experiments ಮಾಡ್ತಾ ಹೋಗ್ತೇನೆ. ಅಂದ್ರೆ ನನಗೆ ಕನ್ವಿಕ್ಷನ್ ಇದೆಯಲ್ಲ.. ಕನ್ವಿಕ್ಷನ್ನಿಂದ ಆಚೆಯಲ್ಲ, ನನ್ನ ಕನ್ವಿಕ್ಷನ್ ಒಳಗಡೆನೇ ಅವುಕ್ಕೆ ಸ್ವಾತಂತ್ರವಿರುವ ಎಲ್ಲಾ ಸ್ವಾತಂತ್ರಗಳನ್ನ ಶೋಧಿಸ್ತಾ ಹೋಗ್ತೇನೆ. ನನಗೊಂದಿಷ್ಟು ಕನ್ವಿಕ್ಷನ್, ಶ್ರಧ್ಧೆ, ಯಾವುದರ ಬಗ್ಗೆನೂ, ಅಸಹಾಯಕರ ಪರವಾಗಿ ಇರಬೇಕು ಈವತ್ತು ಅತಿ ಶ್ರೀಮಂತರು ಜಾಗತೀಕರಣ ಭಾರತವನ್ನ ಅಸಹಾಯಕತೆ ತರಹ ನೂಕಿದೆ. ಇದರ ಕನ್ವಿಕ್ಷನ್ನಲ್ಲಿ ಮಾರ್ಪಟ್ಟಿಲ್ಲ. ಅದರ ಮಿತಿಯೊಳಗೆ ಯಾವುದೋ ಕ್ಯಾರಕ್ಟರ್ ಸ್ವಲ್ಪ ಬೇರೇ ತರಹ ವರ್ತಿಸುತ್ತೆ. ಅದರ ಮಿತಿಯೊಳಗೇನೇ. ಒಂದೊಂದು ಕ್ಯಾರಕ್ಟರ್ ಬೇರೆ ತರ ವರ್ತಿಸಲಿಕ್ಕೆ ಸಾಧ್ಯ ಇದ್ರೆ ಅದನ್ನ ಶೋಧಿಸ್ತಾ ಹೋಗ್ತೀನಿ. ಅದನ್ನ ಸುಳ್ಳು ಅಂತ ಅನ್ನಿಸೋದನ್ನ ನಾನು ಮಾಡೋಕೋಗೋದಿಲ್ಲ
ಪ್ರಶ್ನೆ ೧೨
ನೀವು ಟಿವಿ ಮಾಧ್ಯಮಕ್ಕೆ ಬಂದ ಹಾಗೆ, ಬಂದ ಬಗ್ಗೆ ಒಂದು ಪ್ರಶ್ನೆ. ಅಂದ್ರೆ ನಾಟಕಗಳು ಬಹಳ heightಲ್ಲಿ ಇರೋ ಹೊತ್ತಲ್ಲಿ ನೀವು ಇದ್ರಿ. ಈಗ ಟಿವಿ ಕೂಡ height ನಲ್ಲಿ ಇರೋ ಹೊತ್ತಲ್ಲಿ ನೀವಿಲ್ಲಿದ್ದೀರಿ. ಈ ಎರಡರ ಮಧ್ಯೆ ಒಬ್ಬ ನಿರ್ದೇಶಕನಾಗಿ, ಒಬ್ಬ ನಾಟಕಕಾರನಾಗಿ ಮತ್ತೆ ಒಬ್ಬ script writer ಆಗಿ ಈ ಎರಡೂ ಅನುಭವಗಳನ್ನ ನೀವು ಹೇಗೆ differentiate ಮಾಡ್ತೀರಿ. ಈ ಎರಡೂ ನಿಮಗೆ ಏನನ್ನ ಕೊಟ್ಟಿದೆ?
ಉತ್ತರ
ನೀವು ಮುಂಚೆ ಹೇಳ್ದಂಗೆ ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿದ್ದೀರಿ. ಅದ್ರಲ್ಲಿ ಸೂಕ್ಷವನ್ನ ಹೇಳೋಕೆ ಸಾಧ್ಯ. ನಾಟಕಕಾರನಾಗಿ ಇದರಲ್ಲಿ ಸೂಕ್ಷವನ್ನ ಹೇಳಬೇಕಾದಿದ್ದಿಲ್ಲ. ಇದರಲ್ಲಿ ಕತೆ It is narration ಇದು . ಅದೊಂದು conflictನ ಚಿತ್ರೀಕರಣ. ಯಾವುದು ನಾಟಕಗಳು, ಕತೆಗಳದ್ದು. ಇದು ಒಂದು ವಿಸ್ತಾರವಾದ ರಾಮಾಯಣ ಅನ್ನಬಹುದು, ಮಹಾಭಾರತ ಅನ್ನಬಹುದು.ಆ ತರಹದ ನರೇಶನ್ ಇದು. ಅವು ನೆರೇಟಿವ್ ಅಲ್ಲ ಅವು. So basically ಇವು ಅದರ ಡಿಫೆರೆನ್ಸು. ಅಲ್ಲಿಂದ ಇಲ್ಲಿಗ್ಯಾಕೆ ಬಂದೆ ಅಂತ ಕೇಳಿದ್ರಿ ಇದು ನನ್ನ ವೃತ್ತಿಯಾಗಿ ತೆಗೆದುಕೊಂಡಿದ್ದೆ, ಅದನ್ನ ವೃತ್ತಿಯಾಗಿ ತೆಗೆದುಕೊಂಡಿರ್ಲಿಲ್ಲ. ಪ್ರವೃತ್ತಿಯಾಗಿ ನಾಟಕಗಳನ್ನ ಬರೆದೆ. ಈಗ ನಾಟಕಗಳನ್ನ ಬರೆಯೋಕೆ ಬಿಡುವಿದ್ರೆ ನಾಟಕಗಳನ್ನ ಬರೀತೇನೆ. ಈಗ್ಲೂನೂ ನನಗೆ ನಾಟಕಗಳನ್ನ ಬರೆಯೋಕೆ ಬಿಡುವಿಲ್ಲ.
ಪ್ರಶ್ನೆ ೧೩
ನಿಮ್ಮ ನಾಟಕಗಳಲ್ಲೊಂದಷ್ಟು ಮೂವ್ವ್ಮೆಂಟ್ಸ್ಗಳಿದ್ವು, ಸ್ಟೇಜ್ನ್ ಮೇಲಿನ ಮೂವ್ಮೆಂಟ್ಸ್. ಆದರೆ ನಿಮ್ಮ ಸೀರಿಯಲ್ಗ್ಳಿಗೆ ಬರುವಾಗ ಅವು ಆ ಮೂವ್ಮೆಂಟ್ಸ್ ಗಳು ಬಹಳ ಕಡಿಮೆಯಾಗಿ ಹೆಚ್ಚು ಮಾತು-ಮಾತು ಅನ್ನಿಸ್ತಾ ಇರತ್ತೆ. ಇದು ಬಹಳ conscious ಆಗಿ ಮಾಡಿರೋದು, ಅಂದ್ರೆ “ಸೀರಿಯಲ್ಗಳನ್ನ ನೋಡಲಾಗುವುದಿಲ್ಲ ಕೇಳಲಾಗುತ್ತದೆ” ಅನ್ನೋ ಜನಪ್ರಿಯ ನಂಬಿಕೆ ಇದೆ. ಆ ಕಾರಣಕ್ಕಾಗಿ ನೀವು ಅದರ visual possibilities ಅನ್ನ ಶೋಧನೆ ಮಾಡುತ್ತಿಲ್ವೋ ಅಥವಾ ನಿಮಗೆ ಬೇರೆ ಏನಾದ್ರೂ ಮಿತಿಗಳಿದ್ದಾವೆಯೇ?
ಉತ್ತರ
ಬೇರೆ ಮಿತಿಗಳಿರತ್ವೆ ಅಂದ್ರೆ ನೀವು ಹಿಮಾಲಯ ಪರ್ವತವನ್ನ ಇಲ್ಲಿ ಟಿ.ವಿ.ನಲ್ಲಿ ತೋರಿಸಿದ್ರೆ ಅದು ಹಿಮಾಲಯ ಪರ್ವತ ತರ ಅನ್ನಿಸೋದಿಲ್ಲ. ಮನುಷ್ಯನನ್ನ ಹಿಮಾಲಯ ಪರ್ವತದ ಬುಡದಲ್ಲಿ ನಿಲ್ಲಿಸಿಕೊಂಡು ತೋರಿಸಿದ್ರೆ ನಿಮಗೆ ಮನುಷ್ಯ ಕಾಣೋದೇ ಇಲ್ಲ. ಚಲನ ಚಿತ್ರದಲ್ಲಿ ಕಾಣಿಸ್ತಾನೆ. ಹಾಗೆ ನಾಟಕದಲ್ಲಿ ಮನುಷ್ಯನ 20ನೇ ಒಂದು ಭಾಗ ಸ್ಕ್ರೀನ್ ಇರತ್ತೆ. ಹಾಗಾಗಿ ನಿಮಗೆ ಏನು ಮೂವ್ಮೆಂಟ್ ಮಾಡ್ತೀವಿ ಅದರ ವಿಶುಯಲ್ ಅದು ಇದರಲ್ಲಿ ಮುಖ್ಯವಾಗೋದೇ ಇಲ್ಲ. So Silence, Silenceಗೆ ಬಂದಾಗ Silence plays a big part in all the way ನೀವು ಏನೇ ಮಾಡಿದ್ರೂನೂ ಎಲ್ಲಾ ಸಂಭಾಷಣೆಗಳಲ್ಲೂ ಮೌನ ಅತ್ಯಂತ ಮಹತ್ವದ ಪಾತ್ರವನ್ನ ವಹಿಸುತ್ತೆ. ಸಂಭಾಷಣೆಗಳ ಮಧ್ಯದಲ್ಲಿ ನಾನು ಹೆಚ್ಚು ಮೌನವನ್ನಿಟ್ಟೆ. ವಿಶುಯಲ್ ಮೇಲೆ ಪ್ಲೇ ಮಾಡ್ತಾ ಹೋದೆ ಅಂತಿಟ್ಟುಕೊಳ್ಳಿ. ಯಾರೋ ಇಲ್ಲಿದ್ದು ಅಲ್ಲಿ ಕೇಳಿಸಿ ಕೊಳ್ತಾ ಇರ್ತಾರೆ ಕತೆಯನ್ನ. ಅವರಿಗೆ ಪೂರ್ತಿ ತಟ್ಟದೇ ಇರಬಹುದು. ಹಾಗಾಗಿ ಇಲ್ಲಿ ಸಂಭಾಷಣೆ ಹೆಚ್ಚು ಪ್ರಾಮುಖ್ಯ ಪಡೆಯುತ್ತೆ. ಎರಡು ಒಂದು ಸ್ಕ್ರೀನ್ನ ಅಳತೆಯ ಮಿತಿ ಮತ್ತು ಎಲ್ಲರೂ ಬೇರ್ಬೆರೆ ಕೆಲಸಗಳಲ್ಲಿರ್ತಾರೆ ಅವ್ರು ಕೇಳಿಸ್ಕೊಂಡು ಬರಬಹುದು ಅದಕ್ಕೆ ಆಯ್ತು. ಮತ್ತು ಮಾತು ನಾನು ಹೆಚ್ಚು ಯಾತಕ್ಕೆ ಉಪಯೋಗಿಸ್ತೇನೆ ಅಂದ್ರೆ conscious ಆಗಿ ಉಪಯೋಗಿಸ್ತೇನೆ. Conscious ಆಗಿ ಯಾಕಂದ್ರೆ ಶುದ್ಧ ಕನ್ನಡ ಬರ್ಲಿ ಅಂತ. ಶುದ್ಧ ಕನ್ನಡ ನನಗೆ ಒಂದು ಇಷ್ಟವಾಗೋವಂತಹ ಕನ್ನಡಕ್ಕೆ ಒಂದು ಶಕ್ತಿಯಿದೆ. ಶುದ್ಧ ಕನ್ನಡ ಅಂದ್ರೆ 'ಅ'ಕಾರ 'ಹ'ಕಾರ ಹೇಳ್ತಾ ಇಲ್ಲ, ಒಂದು ಕನ್ನಡದ ನುಡಿಗಟ್ಟಿಗೆ ಒಂದು ಶಕ್ತಿಯಿದೆ. ಆ ಶಕ್ತಿಯನ್ನ ಶೋಧಿಸ್ತಾ ಹೋಗ್ತೀನಿ. ಕಾವ್ಯ ,ಇದು, ಎಲ್ಲಾನೂ ಅವೆಲ್ಲಾ ಮಾತೇ. ನಾನು ವಿಶುಯಲ್ಸ್ ಮೇಲೆ ಹೋಗ್ತಾ ಹೋದ್ರೆ ಆ ಮಾತು ಬರೋದಿಲ್ಲ.
ಪ್ರಶ್ನೆ ೧೪
ಜಾಗತೀಕರಣದ ವಿಷಯ ನೀವು ಹೇಳಿದ್ರಿ. ಜಾಗತೀಕರಣವನ್ನ ನಿಮ್ಮ ಮುಕ್ತ ಧಾರಾವಾಹಿಯಲ್ಲಿ ತರ್ತಾ ಇರೋದನ್ನ ನಾವೂ ನೋಡ್ತಾ ಇದ್ದೀವಿ. ಆದ್ರೇ ಜಾಗತೀಕರಣ ಅಂತ ಹೇಳೋದು ನಾವು ಈಗ ಪ್ರತಿಭಟಿಸಿ ಅದನ್ನ ತಡೆಯೋ ಅಂತದ್ದು ಅಥವಾ ಅದು ಬೇಡ ಅಂತ ಅನೋ ಸ್ಥಿತಿಯಲ್ಲಿ ನಾವಿಲ್ಲ ಈ ಹೊತ್ತಲ್ಲಿ. ಈ ರೀತಿ ಮುಕ್ತದಲ್ಲಿ ನೀಡುತ್ತಿರುವಂತಹ ಪ್ರತಿಕ್ರಿಯೆಗಳು ಎಷ್ಟರ ಮಟ್ಟಿಗೆ ಸೂಕ್ತ.
ಉತ್ತರ
ಇಲ್ಲ ನಾನು ಜಾಗತೀಕರಣದ ಪ್ರಕ್ರಿಯೆಯನ್ನ ನಾನು ಇದು ಮಾಡ್ತಾ ಇಲ್ಲ.ಜಾಗತೀಕರಣದ ಫಲಗಳ ಬಗ್ಗೆ ಹೇಳ್ತಾ ಇದೀನಿ. ಜಾಗತೀಕರಣ ನಮಗೆ ಏನು ಮಾಡ್ತಾ ಇದೆ ಅಂದ್ರೆ ನಮ್ಮನ್ನ consumer society ಮಾಡ್ತಾ ಇದೆ. ಆ consumer Society ಆದ ತಕ್ಷಣ ನನ್ನ ಮನಸ್ಸನ್ನೋದು ಒಂದು ಕ್ರೌರ್ಯ ಬರತ್ತೆ. ಯಾತಕ್ಕೆ ಕ್ರೌರ್ಯ ಬರತ್ತೆ ಅಂದ್ರೆ ಒಂದು ಧನವನ್ನ ಗಳಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಾಗತ್ತೆ. ಜಾಗತೀಕರಣ ಅಂದ್ರೆ ಒಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡಬೇಕು. ಸ್ಪರ್ಧೆಯಲ್ಲಿ ಓಡಬೇಕಂದ್ರೆ ಸ್ಪರ್ಧೆಯ ಮಾನದಂಡ ಏನಂದ್ರೆ ಹೆಚ್ಚು ಗಳಿಸೋದೇ ಮಾನದಂಡ ಜಾಗತೀಕರಣದಲ್ಲಿ. ಹೆಚ್ಚು ಗಳಿಸೋದೇ ಮಾನದಂಡವಾದಾಗ ಒಂದು ಧನ ಯುಗದಲ್ಲಿ ಅದೊಂದು ಅತ್ಯಂತ ಕ್ರೌರ್ಯದ ಮನಸ್ಥಿತಿಯನ್ನ ಸೂಚಿಸತ್ತೆ. ದುಡ್ಡು ಯಾವತ್ತೂ ಕ್ರೌರ್ಯವನ್ನ ತರತ್ತೆ. ಹಾಗಾಗಿ ಅದರ ಪ್ರತಿಫಲಗಳೇ, consumer society ಇವೆಲ್ಲ ಮನುಷ್ಯತ್ವವನ್ನ ಕಡಿಮೆ ಮಾಡ್ತಾ ಹೋಗತ್ತೆ. ಹಾಗಾಗಿ ಜಾಗತೀಕರಣವನ್ನ ಅದರ ಮೂಲಕ ಅದಕ್ಕಾಗಿ ನಾನು ವಿರೋಧಿಸ್ತೇನೆ. ಇದೊಂದು ಅದು ನನ್ನ ಸಂಸ್ಕೃತಿಯನ್ನ ಪೂರ್ತಿಯಾಗಿ ತೆಗೆದುಕೊಳ್ಳತ್ತೆ. ನೀವು universal standards of appreciating a thing ಹಾಗಾಗಿ fashion, ಅಮೆರಿಕಾದ fashion model ಭಾರತದ fashion model ಮತ್ತು ಕರ್ನಾಟಕದ fashion model ಎಲ್ಲರೂ ಒಂದೇ ತರ ಕಾಣಿಸೋದಕ್ಕೆ ಶುರು ಮಾಡ್ತಾರೆ. ನಿಮ್ಮ ಉಪ ಸಂಸ್ಕೃತಿಗಳು ನಿಮ್ಮ ತರದ identity ಎಲ್ಲಾ ಹೋಗಿ ಬಿಡತ್ತೆ ನಿಧಾನವಾಗಿ. ಹಾಗೆ ಹೊರಟೋದಾಗ ನೀವು ಅವರ ಜೊತೆಯಲ್ಲಿ ಸಮವಾಗಿ ಬಿಡ್ತೀರಿ. ಸಮವಾದಾಗ ಅವರಿಗೆ ಮೇಲುಗೈ ಇರತ್ತೆ. ಯಾಕಂದ್ರೆ ಅವರು ಗರಿಷ್ಟರು ,ಬಲಿಷ್ಟರು, ಧನಿಷ್ಟರು ಮತ್ತು ಚರ್ಮದಿಂದಾಗಿ ಅವರಿಗೆ ಬಿಳಿ ಬಣ್ಣ ಇದೆ ಬೇರೆಯವರಿಗೆ. ಹಾಗಾಗಿ ನೀವು inferior ಆಗ್ತೀರ. ಹಾಗಾಗಿ ನಿಮಗೆ ನಿಮ್ಮದೇ ಆದ terms ನಿಮ್ಮದೇ ಆದ ಇದು ಹೊರಟು ಹೋಗಿಬಿಡತ್ತೆ. ಇನ್ನೊಬ್ಬರ universal ಆದ termsನಲ್ಲಿ ನೀವು ಮಾತಾಡ್ಲಿಕ್ಕೆ ಶುರು ಮಾಡ್ತೀರ. Universal ಆದ termsನಲ್ಲಿ ನೀವು ಮಾತಾಡೋಕೆ ಶುರು ಮಾಡಿದ ತಕ್ಷಣ ಅವರಿಗೆ ಎರಡು ಕಾಲಿದ್ವು , ನೀವು ಎರಡು ಕಾಲು ಕಟ್ಟಿಕೊಂಡು ಓಡೋ ತರಹ ಆಗಿ ಬಿಡತ್ತೆ. ಹಾಗಾಗಿ ಇದು unequal in equal.
ಪ್ರಶ್ನೆ ೧೫
ತುರ್ತು ಪರಿಸ್ಥಿತಿಯ ಉತ್ತರದಲ್ಲಿ ಬಂದ ನಾಟಕಗಳು ಆ ಕಾಲದ ರಾಜಕೀಯಕ್ಕೆ ಒಂದು ತರ ಪ್ರತಿಕ್ರಿಯಿಸಿದ್ವು. ಈಗ ವರ್ತಮಾನದ ರಾಜಕಾರಣಕ್ಕೆ ಮುಕ್ತವೂ ಸೇರಿದಂತೆ ನಿಮ್ಮೆಲ್ಲಾ ಧಾರಾವಾಹಿಗಳು ಪ್ರತಿಕ್ರಿಯಿಸಿದ್ವು ಅಂತ ನಾವಂದುಕೊಳ್ಳಬಹುದಾ?
ಉತ್ತರ
ಪ್ರತಿಕ್ರಿಯೆ ನೀಡಿವೆ ಅಂತಂದುಕೊಳ್ತೀನಿ. ನಾನು ರಾಜಕೀಯ ಜಾಗತೀಕರಣವೂ ರಾಜಕೀಯದ ಒಂದು ಇದು ಅದೆಲ್ಲದ್ದಕ್ಕೂ ಪ್ರತಿಕ್ರಿಯೆ ಇದಾಕ್ತಾ ಇದೆ.
ಪ್ರಶ್ನೆ ೧೬
ನೀವು ರಾಜಕೀಯದಲ್ಲಿ ಸ್ಪಷ್ಟ ರಾಜಕೀಯ ನಿಲುವಿದ್ದವರು. ಈಗಲೂ ನಿಮ್ಮ ರಾಜಕೀಯ ನಿಲುವುಗಳೇನು ಅಂತ ಕೇಳಬಹುದಾ?
ಉತ್ತರ
ಅದೇ ಅಂದು ಅಸಹಾಯಕರ ಪರವಾಗಿ ಇರಬಹುದು. ತುಂಬಾ ಶ್ರೀಮಂತಿಕೆಯ ವಿರುದ್ದವಾಗಿ ಇರುವಂತದ್ದು.
ಪ್ರಶ್ನೆ ೧೭
ಅಮೇರಿಕಾ ಇಲಿನಾಯಿಯ ತ್ರಿವೇಣಿ ರಾವ್ ಅವರು ತಮಗೊಂದು ಪ್ರಶ್ನೆ ಕೇಳಿದ್ದಾರೆ. ಅನಿವಾಸಿ ಭಾರತೀಯರ ಬಗ್ಗೆ ಅದರಲ್ಲೂ ವಿಶೇಷವಾಗಿ ಅಮೇರಿಕಾದಲ್ಲಿರುವ ಭಾರತೀಯರ ಬಗ್ಗೆ ಸಾಕಷ್ಟು ಸಿನೆಮಾಗಳು ಇತ್ಯಾದಿಗಳಲ್ಲಿ ಎಲ್ಲಾಕಡೆ ಒಂದು ಚಿತ್ರಣ ದೊರೆಯುತ್ತಿರುವುದು ಅದರಲ್ಲಿ ಕೆಲವೊಂದು ಅಷ್ಟೇ ಅದರಲ್ಲಿ ಕೆಲವಷ್ಟೇ ಸಮರ್ಪಕವಾಗಿವೆ. ಬಹುಪಾಲು ಪೂರ್ವಗ್ರಹಪೀಡಿತವಾಗಿವೆ. ಅವರಲ್ಲೂ ಕೂಡ ಬರೀ ಅಹಂಕಾರ ಅಷ್ಟೇ ಇರೋದಲ್ಲ ಅವರಲ್ಲಿ ಬರೀ ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ತುಡಿತ ಇರೋದು ಮಾತ್ರ ಅಲ್ಲ ಅಲ್ಲಿ ಅದರಾಚೆಗೆ ಅವರಲ್ಲೂ ಆರ್ದ್ರತೆ ಸಂಸ್ಕೃತಿ ಕಡೆಗೆ ತುಡಿತವಿದೆ. ಅದು ತಮ್ಮಂತಹ ಸೃಜನಶೀಲ ನಿರ್ದೇಶಕರಿಂದ ಸರಿಯಾಗಿ ತೆರೆ ಮೇಲೆ ತರಲು ಸಾಧ್ಯ ಅಂತ ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ನೀವೇನಾದ್ರು ಯೋಚನೆ ಮಾಡಿದ್ದೀರಾ ಅಂತ ಅವರ ಪ್ರಶ್ನೆ.
ಉತ್ತರ
ಇಲ್ಲ ನನ್ನ ಇದರಲ್ಲಿ ಅನಿವಾಸಿ ಭಾರತೀಯರ ಪಾತ್ರಗಳು ಬಹಳ ಕಡಿಮೆ ಇದೆ. ತುಂಬಾ ಎಲ್ಲೂ ಬಂದಿಲ್ಲ. ಅವರಲ್ಲೂ ಖಂಡಿತ ಆರ್ದ್ರತೆ ಇದೆ. ನಾನು ಅಲ್ಲಿ ಹೋದಾಗ ಭೇಟಿ ಮಾಡಿದ್ದೇನೆ. ಬಹಳ ಒಳ್ಳೆಯವರಿದ್ದಾರೆ. ಅವರು ಆ ತರಹದ ಇದಲ್ಲ. ಅಲ್ಲಿ ಅನಿವಾರ್ಯ ಕಾರಣಗಳಿಗಾಗಿ ಹೋಗಿ ನೆಲೆಸಿರುತ್ತಾರೆ ಹಾಗಂತ ಈವತ್ತು ಒಂದು ಭಾವನೆ ಇಲ್ಲೇನಿದೆ ಅಂದ್ರೆ ಅಪ್ಪ ಅಮ್ಮನ್ನ ಇಲ್ಲಿ ಬಿಟ್ಟು ಅಲ್ಲಿ ಹೊರಟು ಹೋಗ್ತಾರೆ ಅಂತ. ಅದೊಂದು ಅವರಲ್ಲಿ ಇದಿದೆ ಅಂತ. ಈ ವರ್ಷ ಬರ್ತೀನಂತಾರೆ ಈ ವರ್ಷ ಬರಲ್ಲ. ಮುಂದಿನ ವರ್ಷ ಬರ್ತೀನಂತಾರೆ ಮುಂದಿನ ವರ್ಷ ಬರಲ್ಲ. 5 ವರ್ಷ ಬಿಟ್ಟು ಬರ್ತೀನಂತಾರೆ ಬರಲ್ಲ. ಇಲ್ಲಿ ಪಾಪ ಇವ್ರು ವಯಸ್ಸಾಗ್ತಾ ಇರತ್ತೆ ಅಸಹಾಯಕರಾಗಿರ್ತಾರೆ. ಅವರಿಗೊಂದು ರೋಗ ಖಾಯಿಲೆ ಇರತ್ತೆ. ಆ ಟೈಮ್ನಲ್ಲಿ ಮಕ್ಕಳ ಇದು ಜಾಸ್ತಿ ಇರತ್ತೆ. ಅವರು ಆ ತಂದೆ ತಾಯಿ ಬಗ್ಗೆ ಇಷ್ಟ ಇರತ್ತೆ ಆದರೆ ಯಾವುದೋ ಇದು ಗೆದ್ದು ಬಿಡತ್ತೆ ಅಲ್ಲಿ ಇರಬೇಕಾದಂತಹ ಇದು. ಅಲ್ಲಿನ cleanliness ಅಲ್ಲಿನ ದುಡ್ಡು ಯಾವ್ದೋ ಗೆದ್ದು ಬಿಡತ್ತೆ ಅವ್ರ ಮನಸ್ಸನ್ನ. ಅದನ್ನ ಅನೇಕರು ಹೇಳಬಹುದೇ ಹೊರತು ಅನಿವಾಸಿ ಭಾರತೀಯರಿಗೆ ಮಾನವೀಯತೆ ಕಡಿಮೆ ಅವೆಲ್ಲಾ ಸುಳ್ಳು. ಅವರಲ್ಲಿ ಆರ್ದ್ರತೆ ಫೀಲಿಂಗ್ಸ್ ತುಂಬಾನೇ ಚೆನ್ನಾಗಿರತ್ತೆ. ಅವರ ಸಂಕಟಗಳು ಅವರ ಭಾವನೆಗಳನ್ನು ನಾನು ಕಂಡಿದ್ದೇನೆ.
ಸಂದರ್ಶನ ಚೆನ್ನಾಗಿ ಬಂದಿದೆ. ಕೇಳಿದ ಪ್ರಶ್ನೆಗಳೂ ಸೂಕ್ತವಾಗಿವೆ; ಅವಕ್ಕೆ ಸೀತಾರಾಮ್ ಕೊಟ್ಟ ಉತ್ತರಗಳೂ ಸಮರ್ಪಕವಾಗಿವೆ. ಸಂದರ್ಶನವನ್ನು ಸಾಧ್ಯವಾಗಿಸಿದ 'ಸಂಪದ' ಬಳಗಕ್ಕೆ ಧನ್ಯವಾದ.
- ಶ್ರೀವತ್ಸ ಜೋಶಿ
tvsrinivas41ಮೇ ೨೬, ೨೦೦೬ · ೨೦ ವರ್ಷಗಳ ಹಿಂದೆ
ಸಂಪದಕ್ಕೆ ಮತ್ತೊಂದು ಗರಿ ಮೂಡಿದೆ. ಎಲ್ಲ ಅಂಶಗಳನ್ನೂ ಒಳಗೊಂಡ, ಚಿಕ್ಕದಾದ ಚೊಕ್ಕದಾದ ಸಂದರ್ಶನ ಮನ ತಣಿಸಿತು. ಸೀತಾರಾಂ ಅವರ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ತಿಳಿಸಿಕೊಟ್ಟಿದ್ದಕ್ಕೆ ಸಂಪದದ ತಂಡಕ್ಕೆ ಧನ್ಯವಾದಗಳು. ಟಿವಿ ಧಾರಾವಾಹಿಯನ್ನು ನೋಡದ ನನಗೂ ಈಗ ನೋಡುವ ಮನಸ್ಸಾಗುತ್ತಿದೆ. ಇಲ್ಲಿಯವರೆವಿಗೆ ಸೀತಾರಾಂ ಅವರ ಚಿಂತನೆಗಳನ್ನು ತಪ್ಪಿಸಿಕೊಂಡೆನಲ್ಲ ಎನ್ನಿಸುತ್ತಿದೆ.
ಮತ್ತೊಮ್ಮೆ ತಂಡಕ್ಕೆ ವಂದನೆಗಳು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
asraya.net
ismailಮೇ ೨೭, ೨೦೦೬ · ೨೦ ವರ್ಷಗಳ ಹಿಂದೆ
ಸೀತಾರಾಂ ಅವರ ಸಂದರ್ಶನ ಚೆನ್ನಾಗಿದೆ ಎಂದು ಹಲವರು ಹೇಳಿದ್ದಾರೆ. ಈ ಹಿಂದೆ ನಾವು ನಡೆಸಿದ ಸಂದರ್ಶನಗಳಿಗೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಈ ಸಂದರ್ಶನಗಳನ್ನು ಕೇಳುವುದಕ್ಕೆ ಅಗತ್ಯವಿರುವ ತಾಂತ್ರಿಕ ಸೌಕರ್ಯಗಳಿಲ್ಲದವರಿಗೆ ಅನುಕೂಲವಾಗುವಂತೆ ಇವುಗಳನ್ನು ಟ್ರಾನ್ಸ್ ಸ್ಕ್ರೈಬ್ ಮಾಡಬಹುದು. ಸಂಪದ ಸದಸ್ಯರು ಮನಸ್ಸು ಮಾಡಿದರೆ ಇದೇನು ದೊಡ್ಡ ವಿಷಯವಲ್ಲ. ಯಾರಾದರೂ ಈ ಕೆಲಸ ವಹಿಸಿಕೊಳ್ಳಲು ಸಿದ್ಧರಿದ್ದೀರಾ?
Venkatesh/ವೆಂಕಟೇಶ್/ಹೊರಂಲವೆಂಜೂನ್ ೧೧, ೨೦೦೬ · ೨೦ ವರ್ಷಗಳ ಹಿಂದೆ
ನನ್ನ "ಆಡಿಯೊ" ಕೆಟ್ಟಿದ್ದರಿಂದ ಇದುವರೆಗು ಇದನ್ನು ಕೇಳಲು ಆಗಿರಿಲಿಲ್ಲ. ಈ ದಿನ ಸಾಧ್ಯವಾಯಿತು !! ನಿಮ್ಮ ಎಲ್ಲ 'ಶ್ರಾವ್ಯ' ಗಳು ಅತ್ಯಂತ ಮಧುರ ! ಏಕೆಂದರೆ ಅದರಲ್ಲಿ ನೀವು ಜೀವತುಂಬುವುದರಿಂದ ! ಸೀತಾರಾಮ್ ,ನನಗೆ ಬಹು ಪ್ರಿಯರು ! ಅವರ ಧಾರಾವಾಹಿ 'ಮಾಯಾಮೃಗ' ನಮ್ಮ ನೆಯವರನ್ನೇನು "ಪಕ್ಕದ ವಠಾರ ದವರನ್ನು, ಗಾಢವಾಗಿ ಕಾಡಿತ್ತು" ಎಂದರೆ ಅತಿಶಯೋಕ್ತಿಯಲ್ಲ ! ಸಂದರ್ಶನದ ಬಗ್ಯೆ ನನ್ನ ಅನಿಸಿಕೆ :
೧. ಕನ್ನಡದ ಮಹಾಮಹಿಮರ ಮನೆಮಾತು "ಕನ್ನಡ" ಆಗಲು ಹೇಗೆ ಸಾಧ್ಯ ? ಎಂದು ನನಗೆ ಬಹಳ ಬಾರಿ ಅನ್ನಿಸಿತ್ತು. ನೋಡಿ, ಡಿ.ವಿ.ಜಿ, ಕೈಲಾಸಂ, ರಾಜರತ್ನಂ, ಆರ್.ಕೆ.ಲಕ್ಷ್ಮಣ್, ರಾಶಿ, ನಾ.ಕಸ್ತೂರಿ, ಕೆ.ವಿ.ಐಯ್ಯರ್, ಪುತಿನ, ಮಾಸ್ತಿ, ಎ.ಕೆ.ರಾಮಾನುಜಂ ಇತ್ಯಾದಿ... ಗಳೇ ಸಾಕ್ಷಿ !
ನನಗೆ ಅವರುಗಳಬಗ್ಯೆ ಹೆಮ್ಮೆ. ಅವರೆಲ್ಲಾ ಶ್ರೇಷ್ಟ ಕನ್ನಡಿಗರು ! ಸೀತಾರಾಂ ಅದಕ್ಕೆ ಹೊರತಲ್ಲ.
೨. ಅವರು ಜಾಗತೀಕರಣದ ವಿರೋಧಿಯಲ್ಲ.ಆದರೆ ಅದರಿಂದ ನಮ್ಮಜನರಿಗೆ, ಕೃಷಿಕರಿಗೆ ಒಳ್ಳೆಯದಾಗಬೇಕಷ್ಟೆ ಎಂದಿರುವುದು ಶ್ಲಾಘನೀಯ !
೩. ಶುದ್ಧ ಕನ್ನಡದ ಉಪಯೋಗಕ್ಕೆ ಶ್ರಮಿಸುತ್ತಿರುವುದು ನಮಗೆ ಆದರ್ಶಪ್ರಾಯವಾಗಿದೆ.ಭಾವನಾತ್ಮಕ ಪ್ರತಿಕ್ರಿಯಗಳಿಗೆ ಒತ್ತುಕೊಡುತ್ತಾರೆ.
೪. ಅನಿವಾಸಿ ಭಾರತೀಯರನ್ನು ಹತ್ತಿರದಿಂದ ನೋಡಿ ಸ್ಪಂದಿಸಿ ನಮಗೆ ಮಾಹಿತಿ ದೊರಕಿಸಿದ್ದಾರೆ.
೫. ನನ್ನಂತೆ, ಸಂಪದ ಬಳಗದ ಸದಸ್ಯರಿಗೆ ಉತ್ತರಿಸಿರುವುದು,ಬಹಳ ಚಿನ್ನಾಗಿದೆ; ಏಕೆಂದರೆ ನಾವೆಲ್ಲಾ ಅವರ ಭಂಟರು !!
೬. ಹೀಗೆಯೆ ಇನ್ನು ಉತ್ತಮ ಸಂದರ್ಶನಗಳು ಮೂಡಿಬರಲೆಂದು ಹಾರೈಸುತ್ತೇನೆ.
೭. ಒಂದು ಸವಿನಯ ಪ್ರಾರ್ಥನೆ : ನಿಮ್ಮ ಸಂದರ್ಶನಕಾರರ ದ್ವನಿ ಬಹಳ 'ಕ್ಷೀಣ' ವಾಗಿದ್ದು ನನ್ನಂತಹ ವಯಸ್ಸಾದವನಿಗೆ ಸ್ವಲ್ಪ ಕಷ್ಟವಾಯಿತು !ಏನಾದರು ಮಾಡಿ !!
ismailಜೂನ್ ೧೧, ೨೦೦೬ · ೨೦ ವರ್ಷಗಳ ಹಿಂದೆ
ಸಂದರ್ಶನಕಾರರ ಧ್ವನಿ ಕ್ಷೀಣವಾಗಿರುವುದು ನಮ್ಮ ಅರಿವಿಗೂ ಬಂದಿದೆ. ನಿಮ್ಮ ಸಲಹೆಗೆ ಧನ್ಯವಾದಗಳು. ಮುಂದಿನ ಬಾರಿ ಈ ತಪ್ಪನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ.
Venkatesh/ವೆಂಕಟೇಶ್/ಹೊರಂಲವೆಂಜೂನ್ ೧೨, ೨೦೦೬ · ೨೦ ವರ್ಷಗಳ ಹಿಂದೆ
ಕರ್ನಾಟಕ ಸಂಗೀತ ವಿದುಷಿ ಯರಾದ ಇಬ್ಬರು ಪ್ರಸಿದ್ಧ ಗಾಯಕಿಯರ ಸಂದರ್ಶನ ಮಾಡಿ ಅವರ ಧ್ವ ನಿಯನ್ನು ಸೆರೆಹಿಡಿದು ಕನ್ನಡದ ಜನತೆಗೆ ಒದಗಿಸಿ.
೧. ಶ್ರೀಮತಿ. ಡಾ.ಸುಕನ್ಯ :- ಇವರು ತಮ್ಮ ಪಿ.ಎಚ್.ಡಿ ಗೆ 'ಜಯಚಾಮರಾಜೇಂದ್ರ ಪೊಡೆಯರ ರಚನೆಗಳನ್ನು ತೆಗೆದುಕೊಂಡು, ಅವುಗಳ ಪರಿಚಯಮಾಡಿಕೊಟ್ಟಿದ್ದರು.
೨. ಶ್ರೀಮತಿ. ಡಾ.ಸತ್ಯವತಿಯವರು:- ಇವರು ಸಂಗೀತವನ್ನು, ಕರಗತ, ಕಂಠಗತ ಮಾಡಿಕೊಂಡು ಅತ್ಯಂತ ವಿದ್ವತ್ ಪೂರ್ಣವಾಗಿ, ಸಾಮಾನ್ಯರಿಗೂ ತಿಳಿಯುವಂತೆ ರಾಗಗಳ ಜಾಡನ್ನು ಪರಿಚಿಯಿಸುತ್ತಾ ಹಲವಾರು ಕೃತಿಗಳನ್ನು ಹಾಗೆಯೆ ಹೇಳಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದರು.
ಈ ಇಬ್ಬರು ಮಹಾನ್ ಕಲಾಕಾರರು ಮುಂಬೈ ಗೆ ಹೋದ ವರ್ಷ ಬಂದಿದ್ದರು. ಅವರ ಈ "ಗಾಯನ-ಉಪನ್ಯಾಸ ಗಳ ಸಾಮರ್ಥ್ಯ" ವನ್ನು ಜೀವಂತವಾಗಿ ಸೆರೆಹಿಡಿಯುವ ಮೂಲಕ ಬಳಸಿಕೊಳ್ಳಿ !
ಕರ್ನಾಟಕ ಸಂಗೀತದ ಪ್ರೇಮಿಗಳು ಅಪಾರ ! ಸ್ವಲ್ಪ ದ್ವನಿಯನ್ನು ಎತ್ತರಿಸ ಬೇಕು,ಮತ್ತು ಸಂಸ್ಕರಿಸಬೇಕು.
Venkatesh/ವೆಂಕಟೇಶ್/ಹೊರಂಲವೆಂಜೂನ್ ೧೩, ೨೦೦೬ · ೨೦ ವರ್ಷಗಳ ಹಿಂದೆ
ಭಾಷೆ, ಒಂದು ವಿಶಾಲ ವೃಕ್ಷ. ಅದರ ಅಡಿ ಹಾಗು ಶಿಖರದ ಬಳಿ ಎಲ್ಲಾ ಪ್ರಕಾರಗಳೂ ಪ್ರಫುಲ್ಲಿತವಾಗಿ ಬೆಳೆದು ಮುದನೀಡುತ್ತವೆ.ಸಾಹಿತ್ಯ, ನುಡಿ ಒಂದು ಭಾಗವಾದರೆ, ಸಂಗೀತ ಬರುವುದೂ ಭಾಷೆಯ ಮಾಧ್ಯಮದಿಂದಲೆ. ಅದು ಆನಂದದ ಸೀಮೆಯನ್ನು ದಾಟಿ ಬರುವುದು, (ಹಷೋಲ್ಲಾಸ) ನಮ್ಮೆಲ್ಲರಿಗೂ ಅನುಭವಕ್ಕೆ ಬಂದ ಸಂಗತಿ ! 'ಶ್ರಾವ್ಯ'ದಲ್ಲಿ ಇಂತಹ ಸಂಕೀರ್ಣತೆಯನ್ನು ಸೊಗಸಾಗಿ ನಮ್ಮದಾಗಿಸ ಬಹುದೇನೊ ಎನ್ನುವ ಮತ ನನ್ನದು. ಇದು ಸಹೃದಯರಿಗೆ, ಮೇಧಾವಿಗಳ ತೀರ್ಮಾನಕ್ಕೆ ಬಿಟ್ಟ ವಿಷಯ !
ಪ್ರದೀಪ್ ಭಟ್ಜೂನ್ ೧೩, ೨೦೦೬ · ೨೦ ವರ್ಷಗಳ ಹಿಂದೆ
ವೆಂಕಟೇಶರೆ,
ನೀವು ಹೇಳಿದ್ದು ಅಕ್ಷರಶಃ ನೆರವೇರಲಿ! ಎಲ್ಲೆಡೆಯಿಂದ ಬರಲಿ ಈ ರೀತಿಯ ಸಂದರ್ಶನಗಳು, ಶ್ರಾವ್ಯಗಳು!
ನಾಟಕಕಾರನೋ, ಕವಿಯೋ, ಪ್ರಬಂಧಕರ್ತೃವೋ, ಯಕ್ಷಗಾನ ಕಲಾವಿದನೋ, ಟೀಕಾಕಾರನೋ, ಚಲನಚಿತ್ರ ನಿರ್ದೇಶಕನೋ, ನಟನೋ, ನಟಿಯೋ, ವರ್ತಕನೋ, ರಾಜಕಾರಣಿಯೋ, ಅಥವಾ ಯಾವುದೇ ವಿಶೇಷಣವಿಲ್ಲದ ಸಾಮಾನ್ಯ ಪ್ರಜೆಯೋ, ಯಾರೇ ಇರಲಿ, ಬರಲಿ ಇಂತಹ ಸಂದರ್ಶನಗಳು! ಎಲ್ಲರ ಅಭಿಪ್ರಾಯಗಳನ್ನು ಆಲಿಸೋಣ, ಅರಿಯೋಣ, ಅವರಿಂದ ಕಲಿಯಲು ಏನಾದರೂ ಇದ್ದರೆ ಕಲಿಯೋಣ! ಇದರಿಂದ ನಮ್ಮ ಅರಿವು ಹೆಚ್ಚುವುದೇ ಹೊರತು ಕುಂದುವುದಿಲ್ಲ!
"ಆನೋ ಭದ್ರಾಃ ಕೃತವೋ ಯಂತು ವಿಶ್ವತಃ", ಎಲ್ಲೆಡೆಯಿಂದ ಬರಲಿ ಜ್ಞಾನ ಭಂಡಾರ, ಅದನ್ನು ಸೂರೆಗೊಳ್ಳುವ! ಕುವೆಂಪುರವರ ನುಡಿಯಂತೆ,
ಎಲ್ಲಿಯೂ ನಿಲ್ಲದಿರೋಣ, ಮನೆಯನೆಂದೂ ಕಟ್ಟದಿರೋಣ, ಕೊನೆಯನೆಂದೂ ಮುಟ್ಟದಿರೋಣ!
ahoratraಜೂನ್ ೧೩, ೨೦೦೬ · ೨೦ ವರ್ಷಗಳ ಹಿಂದೆ
ಸಂಪದಕ್ಕೆ ಕನ್ನಡವೊಂದೆ ಮಿತಿಯೆಂದು ತಿಳಿಯೋಣ, ಮತ್ಯಾವ ಬಂದನಗಳೂ ಬೇಡ. ಶ್ರೀ ವೆಂಕಟೇಶರ ಮತ್ತು ಶ್ರೀ ಭಟ್ಟರ ಮಾತು ಸಮಂಜಸವೆನಿಸುತ್ತದೆ, ಮತ್ತು ಯಾರನ್ನು ಸಂಧರ್ಶಿಸುವುದು ಎನ್ನುವುದು ಸಂಪದಕ್ಕೆ ಬಿಟ್ಟದ್ದು. ನಿಮಗೆ ಗೊತ್ತಿರುವವರನ್ನು ಹೆಸರಿಸುವಲ್ಲಿ ಸಂಪದಕ್ಕೆ ಉಪಕಾರವೇ ಆದೀತು. ಕಲಾವಿದರಿಗೆ ಪ್ರೋತ್ಸಾಹವೂ ಸಿಗುವುದು.
ಮುನಿಸಿದ್ದಲ್ಲಿ ಮನ್ನಿಸಿ,
ಅಹೋರಾತ್ರ
Venkatesh/ವೆಂಕಟೇಶ್/ಹೊರಂಲವೆಂಜೂನ್ ೧೩, ೨೦೦೬ · ೨೦ ವರ್ಷಗಳ ಹಿಂದೆ
ಭಟ್ಟರಿಗೆ ನಮಸ್ಕಾರಗಳು .
"ನಹಿ ಜ್ಞಾನೇನ ಸದೃಶಂ" ಎಲ್ಲೆಡೆಯಿಂದಲೂ ನಮ್ಮ ಜೀವನದಲ್ಲಿ ಹೊಸ ಹೊಸ ವಿಚಾರ ವಾಹಿನಿಗಳು ಬಂದು ನಮ್ಮ ಬದುಕನ್ನು ಸಮೃದ್ಧ ಗೊಳಿಸಲಿ. 'ಯಕ್ಷಗಾನ'ದ ಬಗ್ಯೆ ಓದಿದರೆ ಸಾಲದು.ಶಿವರಾಮಕಾರಂತರ ಕನಸುಗಳನ್ನು ನನಸು ಮಾಡಬೇಕಾದರೆ ಬಲವಾದ 'ಸಂಪದ'ದಂತಹ ಮಾಧ್ಯಮವನ್ನು ಮೊರೆಹೋಗದೆ ಸಾಧ್ಯವಿಲ್ಲ.ನಾಡಿಗರಂತಹ, ಹೊಸ ಹೊಸ ವಿಷಯಗಳಿಗೆ ಸ್ಪಂದಿಸುವಂತಹ ಯುವಕರು ಖಂಡಿತ ಈ ಕೆಲಸ ಮಾಡೇಮಾಡುತ್ತಾರೆ ಎಂಬ ನಂಬಿಕೆ ನನಗೆ !
ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್ನಿಂದ ಯಾವಾಗ ಬೇಕಾದರೂ ಬದಲಿಸಬಹುದು.Articles and books stay in their original language. Change this any time with the ಕನ್ನಡ | English switch at the top of the page.
ಪ್ರತಿಕ್ರಿಯೆ (6)