ಎಲ್ಲರಿಗೂ ನಮಸ್ಕಾರ.
ಮರ ಸಂಸ್ಥೆಯು ಗುರು ಸ್ಕೂಲ್ ಜೊತೆಗೂಡಿ ಪ್ರತಿ ತಿಂಗಳ ಮೊದಲನೇ ಬಾನುವಾರದಂದು ನೆಲಮಂಗಲದಲ್ಲಿ ಸಂಡೇ ಜಾಮ್ ನಡೆಸುತ್ತಿದೆ. ಇದರ ಉದ್ದೇಶ ಏನಂದರೆ ಪ್ರತಿಯೊಬ್ಬರಲ್ಲಿ ಇರುವ ಕಲೆಯನ್ನು ಹೊರ ತರುವುದು. ಇದರಲ್ಲಿ ನಾಟಕ, ಸಂಗೀತ, ಕವನ, ಏಕಪಾತ್ರಾಭಿನಯ ಇತ್ಯಾದಿಗಳನ್ನು ಇಲ್ಲಿ ಮಾಡಬಹುದು. ಇದರ ಜೊತೆಗೆ ಕನ್ನಡ ತಂಡಗಳು, ಹಿಂದಿ ತಂಡಗಳು, ಇಂಗ್ಲಿಷ್ ತಂಡಗಳು ಅನ್ನೋ ಬೇದ ಭಾವ ಇಲ್ಲದೆ ಎಲ್ಲರೂ ಸಹ ಒಂದು ಕಡೆ ಸೇರಿ ತಮ್ಮ ಕಲೆಯನ್ನು ಪ್ರದರ್ಶಿಸಲು ಒಂದು ಅವಕಾಶ ಮತ್ತು ಪ್ರತಿಯೊಬ್ಬರಲ್ಲೂ ಸಹ ಸಂಪರ್ಕವನ್ನು ಬೆಳೆಸಲು ಸಾಧ್ಯವಾಗುತ್ತದೆ. ಈಗಾಗಲೇ ಅಕ್ಟೋಬರ್ ತಿಂಗಳ ಮೊದಲ ಸಂಡೇ ಜಾಮ್ ಮಾಡಿದ್ದು ಹಲವಾರು ತಂಡಗಳು ಬಂದು ಭಾಗವಹಿಸಿ ಪ್ರದರ್ಶಿಸಿದವು ಇದು ಎರಡನೇ ಸಂಡೇ ಜಾಮ್ ನಡೆಯುತ್ತಿದೆ. ಇಲ್ಲಿ ಅಭಿನಯಿಸುವವರು ಮಾತ್ರ ಬರಬೇಕಾಗಿಲ್ಲ ಅಭಿನಯವನ್ನು ನೋಡಲು ಸಹ ಬರಬಹುದು ಉಚಿತ ಪ್ರವೇಶವಾಗಿದೆ. ಕಾರ್ಯಕ್ರಮವು ಮದ್ಯಾಹ್ನ 12:30 ಕ್ಕೆ ಪ್ರಾರಂಭವಾಗಿ ಸಂಜೆ 5:00 ಗಂಟೆಗೆ ಮುಕ್ತಾಯವಾಗುತ್ತದೆ. ಕಾರ್ಯಕ್ರಮವು ನೆಲಮಂಗಲದ ಬಳಿ ಸುಮಾರು 5 ಕಿ.ಮೀ ದೂರದಲ್ಲಿರುವ ಗುರು ಸ್ಕೂಲ್ ನಲ್ಲಿ ನಡೆಯುತ್ತದೆ. ಗುರು ಸ್ಕೂಲ್ ವಿಶಾಲವಾದ ಬಯಲು ಪ್ರದೇಶ ಸುತ್ತಲು ನೀರು ಹರಿಯುತ್ತದೆ ಹಸಿರು ಗಿಡ ಮರಗಳು ತುಂಬಾ ಸುಂದರವಾದ ಪ್ರದೇಶ. ಇಲ್ಲಿ ಯಾವುದೇ ತಂಡ ಭಾಗವಹಿಸಬಹುದು, ಒಬ್ಬ ವ್ಯಕ್ತಿ ಭಾಗವಹಿಸಬಹುದು, ಸಮಯ 2 ನಿಮಿಷ ಆಗಬಹುದು, 10 ನಿಮಿಷ ಆಗಬಹುದು, ಯಾವುದೇ ಭಾಷೆ ಆಗಬಹುದು, ನಿಮ್ಮ ಅಭಿನಯವನ್ನು ನೋಡಲು ನಿಮ್ಮ ಹಿಂದೆ ಪ್ರೇಕ್ಷಕರು ಇರುವರು. ಹೆಚ್ಚು ಹೆಚ್ಚು ಕನ್ನಡಿಗರು, ಕನ್ನಡ ತಂಡಗಳು ಬಂದರೆ ತುಂಬಾ ಸಂತೋಷ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕ್ಯಾನ್ಸರ್ ಬದಲಿಗೆ ಏಡ್ಸ್
ಪ್ರವಾಸದ ಜೊತೆ ಸಂಪದಿಗರ ಬೇಟಿ
ಅಮೆರಿಕನ್, ರಷ್ಯನ್, ಇಂಡಿಯನ್ ದೇಶಗಳಲ್ಲಿ ಏನು ನಡೆಯತ್ತೆ ?
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)