ಭಜಿಸಿ ಬದುಕೆಲೊ ಮನುಜ
---------------------
ಕಾಂಬೋದಿ ರಾಗ, ಝಂಪೆ ತಾಳ.
ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ
ಅಜ ಸುರೇಂದ್ರಾದಿಗಳ ಆದಿ ವಂದಿತ ಪಾದ
ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ
ಕಾಕು ಶಕಟನ ತುಳಿದು ಕೊಂದಪಾದ
ಲೋಕೇಶನಿಗೆ ಒಲಿದು ಪೂಜೆಗೊಂಬುವಪಾದ
ಲೋಕಪಾವನ ಗಂಗೆ ಜನಿಸಿದಾ ಪಾದ
ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಪಾದ
ಒಲಿದು ಪಾರ್ಥಗೆ ಧರೆಯನೊತ್ತಿದ ಪಾದ
ಕೊಲಿಸಿ ಕಾಳಗದಿ ಕೌರವರ ಕೆಡಹಿದ ಪಾದ
ಬಲಿದ ಕಾಳಿಂಗನು ತುಳಿದಪಾದ
ಗರುಡ ಶೇಷಾದಿಗಳು ಪೊತ್ತುಕೊಂಡಿಹ ಪಾದ
ಧರೆಯ ಈರಡಿಮಾಡಿ ಅಳೆದ ಪಾದ
ಸಿರಿ ತನ್ನ ತೊಡೆಯ ಮೇಲಿರಿಸಿ ಸೇವಿಸಿದ ಪಾದ
ವರಕಾಗಿನೆಲೆಯಾದಿ ಕೇಶವನ ಪಾದ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!