BA, Bsc, Bcom, ಇದನ್ನು ಓದುತ್ತಿರುವ ಬೆಂಗಳೂರಿನ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದಲ್ಲಿ ಎದುರುಸುತ್ತಿರುವ ಸಮಸ್ಯೆ ಎಂದರೆ (RESULT) ಫಲಿತಾಂಶ.ನಾವು ಉತ್ತರ ಪತ್ರಿಕೆಯಲ್ಲಿ ಬರೆದಸ್ಟು ಅಂಕ ನಮ್ಮ ಫಲಿತಾಂಶದಲ್ಲಿ ಬರುವುದಿಲ್ಲ. ಸರಿಯಾದ ವೇಳೆ ಗೆ ಫಲಿತಾಂಶ ಬರುವುದಿಲ್ಲ. ಎಸ್ಟೋ ಜನರ ಫಲಿತಾಂಶ ಬಂದೆ ಇಲ್ಲ. ಈಗ ಒಂದು ತಿಂಗಳು ಹಿಂದೆ ಎರಡನೆ ಸೆಮಿಸ್ಟರ್ ನ ಫಲಿತಾಂಶ ಬಂತು. ಆ ಫಲಿತಾಂಶದ ಪಟ್ಟಿ ಯಲ್ಲಿ ನನ್ನ ಸ್ನೇಹಿತೆಯರ ಹೆಸರೇ ಆ ಫಲಿತಾಂಶದ ಪಟ್ಟಿಯಲ್ಲೇ ಇಲ್ಲ. ಇದುವರೆಗೂ ಅವರ ಫಲಿತಾಂಶ ಬಂದು ಇಲ್ಲ. ಕೇಳಿದರೆ ಒಂದು ಲೆಟರ್ ಬರೆದು ಕೊಡಿ ಅಂತಾರೆ. ನನ್ನ ಎರಡನೆ ಸೆಂ "ಇಂಟರ್ನಲ್ ಮಾರ್ಕ್ಸ್" ಹಾಗು "ಅಂಕಪಟ್ಟಿ" ಬಂದಿಲ್ಲ, ಅದಕ್ಕೆ ಲೆಟರ್ ಕೊಟ್ಟು ಒಂದು ವರ್ಷ ಆಯಿತು. ಆ ಲೆಟರ್ ವಿಶ್ವ ವಿದ್ಯಾನಿಲಯ ದಲ್ಲಿ ಯಾವ ಕಸದ ಬುಟ್ಟಿಗೆ ಹೋಗಿ ಬಿತ್ತೂ ಗೊತ್ತಿಲ್ಲ. ಇಷ್ಟು ಬೇಜವಬ್ದರಿ ಯಾಗಿ ಪ್ರತಿಕ್ರಿಯಿಸಿದರೆ ನಮ್ಮ ಮುಂದಿನ ಬವಿಷ್ಯ ಹೇಗೆ? ನಮ್ಮ ಫಲಿತಾಂಶ ಪಾಸು ಆಗಿದೆಯೋ ಇಲ್ಲವೊ ತಿಳಿಯುವುದು ಹೇಗೆ? ಅಕಸ್ಮಾತ್ ನಮ್ಮ ಫಲಿತಾಂಶ ಫೈಲ್ ಅಂಥ ಇದ್ದರೆ ನಾವು ಅದನ್ನು ಮುಂದಿನ ಸೆಂ ನಲ್ಲಿ ಬರೀ ಬೇಕಾಗುತ್ತದೆ. ಆದರೆ ನಮ್ಮ ಫಲಿತಾಂಶವೇ ನಮಗೆ ಸಿಗದಿದ್ದರೆ ನಾವು ಏನು ಮಾಡಬೇಕು? ನಮ್ಮ ಅಂಕ ಪಟ್ಟಿಗಳೇ ನಮಗೆ ಸಿಗದಿದ್ದಲ್ಲಿ ನಾವು ಇಂಟರ್ವ್ಯೂ ಗಳಿಗೆ ಹೇಗೆ ಹೋಗುವುದು ? ಈ ವಿಷಯ ಗಳನೆಲ್ಲ ಯಾಕೆ ತಿಳಿದು ಕೊಳ್ಳುತಿಲ್ಲ ? ಸಂಪದ ದಲ್ಲಿ ಯಾರಾದರು ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಸಂಬಂದ ಪಟ್ಟವರಿದ್ದರೆ, ದಯವಿಟ್ಟು ನಮಗೆ ಸಹಾಯ ಮಾಡಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"LOVE" IN BANGALORE
ಸ್ವತಂತ್ರ ದಿನಾಚರಣೆ - ಆಗಸ್ಟ್ ೧೫
2012 ಕ್ಕೆ ಭೂಮಿ ಇರುತ್ತಾ?? ನಾವ್ ಬದುಕ್ತೀವಾ ?? ಸಾಯ್ತಿವಾ ??
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!