ಟೆಲಿಫೋನ್ ಗುಣುಗುಣಿಸಿತು.
ನಿದ್ದೆಯ ಮಂಪರಿನಲ್ಲಿದ್ದೆ. ರಾತ್ರೆಯ ಹನ್ನೆರಡು ಘಂಟೆ. ಈಗ ನನ್ನ ಅವಶ್ಯಕಥೆ ಯಾರಿಗೆ ಬಂತೋ?.
ನಾನೇನೂ ವ್Rಅತ್ತಿಯಲ್ಲಿ ವೈದ್ಯನೂ ಅಲ್ಲ, ವಕೀಲನೂ ಅಲ್ಲ,
" ಹಲ್ಲೋ" ಎಂದೆ.
"ಹೆಪ್ಪೀ ಬರ್ಥ್ ಡೇ!!" ಒಂದು ಹೆಣ್ಣಿನ ದನಿ.
ನಾನಂತೂ ಜನವರಿಯ ಆ ಘನ ಚಳಿಯಲ್ಲಿ ನನ್ನಮ್ಮನ್ನ ತೊಂದರೆ ಕೊಟ್ಟೋನು.
ಹಾಗಿರುವಾಗ, ನನ್ನ ಜನ್ಮದಿನ ಈ ೞೆಬ್ರವರಿಯಲ್ಲಿ ಹೇಗಾಯ್ತು?, ಯಾರಾದರೂ ನನ್ನನ್ನು (ಎಪ್ರಿಲ್) ಫೂಲ್ ಮಾಡ್ತಾ ಇಲ್ಲ ತಾನೇ? ಎಚ್ಚೆತ್ತು ಕೊಂಡು ಕೇಳಿದೆ
"ಯಾರಮ್ಮ ಬೇಕಾಗಿತ್ತು?"
ಮೂರ್ನಾಲ್ಕು ದನಿಗಳ ಅಸ್ಪಸ್ಟ ಕಿರಿಚಾಟಗಳ ನಡುವೆ,
"ಲೇಯ್ ರಾಂಗ್ ನಂಬ್ರಕ್ಕೆ ಹೋಯ್ತು ಕಣೆ"
ಅಷ್ಟರಲ್ಲಿ ಇನ್ನೊಂದು ದನಿ "ಅದೇನಿಲ್ಲ, ಅವಳ ತಮಾಷೆ ನನಗೆ ಗೊತ್ತಿಲ್ವಾ? ಅವಳು ಯಾವಾಗಲೂ ಹಾಗೇನೇ!!,
ಇರು ನಾನು ಮಾಡ್ತೀನಿ, ನನಗೆ ಕೊಡು ಫೋನ್" ಎಂದ ಇನ್ನೊಂದು ದನಿ ನನಗೆಂದಿತು
" ಏಯ್ ಲೀಲಾ ತಮಾಷೆ ಮಾಡಬೇಡ ಕಣೇ"
ನಾನೆಂದೆ " ಅಲ್ಲಮ್ಮಾ, ನಿಜವಾಗಿಯೂ ನಾನು ಲೀಲಾ ಅಲ್ಲ"
ಗಲಿಬಿಲಿಗೊಂಡಂತೆ ಕಂಡು ಬಂದರೂ
" ನೋಡು ನೋಡು ಹೇಗೆ ದನಿ ಬದಲಾಯಿಸಿ ಮಾತನಾಡ್ತಾ ಇದ್ದಾಳೆ, ಈ ಫೆಬ್ರವರಿಯಲ್ಲಿ ಎಪ್ರಿಲ್ ಫೂಲ್ ಮಾಡ್ತಾ ಇದ್ದೀಯಾ ಹೇಗೆ?"
ಈಗಂತೂ ನಾನೇ ಬೆಸ್ತು ಬೀಳುವ ಹಾಗಾಯ್ತು ' ನೋಡಮ್ಮಾ ನಿಮಗೆಲ್ಲೋ ನಂಬರ್ ತಪ್ಪಿರಬೇಕು, ನಾನು ಲೀಲಾನೂ ಅಲ್ಲ, ಬೇಲಾನೂ ಅಲ್ಲ, ನನ್ನ ಹೆಸರು ಗೋಪಿನಾಥ, ನಾನು ನೀವು ಬಯಸುವ ಲೀಲಾ ಸುತರಾಮ್ ಅಲ್ಲ" ಎಂದೆ.ಲೈನ್ ಕಟಾಯ್ತು.
ನನ್ನ ಸ್ವರ ಈ ಟೆಲಿಫೋನ್ ನ ರಿಸೀವರ್ ನಂತಹಾ ಪುಟ್ಟ ಯಂತ್ರದಲ್ಲಿಳಿದು ಅದು ಹೇಗೆ ಆ ರಾತ್ರಿಗೆ ಲೀಲಾನದ್ದಾಗಿ ಪರಿವರ್ತಿಸಲ್ಪಟ್ಟಿತೋ ಇನ್ನೂ ಅರ್ಥವಾಗಿಲ್ಲ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!