ಸುಮಾರು ನಲವತ್ತು ವರ್ಷದೋನು ತನ್ನ ತಾಯಿಯನ್ನ ನೋಡಿಕೊಳ್ಳಲು ಒಬ್ಬ ಹೆಂಗಸನ್ನು ಗೊತ್ತುಮಾಡಿಕೊಂಡು ಕಾರಿನಲ್ಲಿ ಅವಳನ್ನ ಕರೆದುಕೊಂಡು ಹೋಗುವಾಗ ಹೆಂಡತಿಗೆ ಫೋನ್ ಮಾಡಿ ವಿಷಯ ತಿಳಿಸ್ತಾನೆ.
ಹೆಂಡತಿ - 'ಅವಳು ನಿಂಗೆ ಯಾರನಾದ್ರೂ ವ್ಯವಸ್ಥೆ ಮಾಡೋಕೆ ಹೇಳಿದ್ಲಾ?'
ಗಂಡ - 'ನಿಂಗೇ ಗೊತ್ತಲ್ಲ ? ಅವಳು ಯಾವಾಗ ಏನು ಬೇಡಿದ್ದಾಳೆ ?'

ತಾಯ ಮನೆ ತಲುಪಿದಾಗ ಅಮ್ಮನಿಗೆ ಹೇಳುತ್ತಾನೆ - ನಿನ್ನನ್ನ್ ನೋಡಿಕೊಳ್ಳಲು ಇವಳನ್ನ ಕರೆದುಕೊಂಡು ಬಂದೀನಿ.
ತಾಯಿಗೆ ಎ೦ಬತ್ತಕ್ಕೂ ಹೆಚ್ಚು ವರ್ಷ , ಅರಳು ಮರಳು . 'ಇವಳು ನಿನ್ನ ಹೆಂಡ್ತೀನಾ ? '
'ಅಲ್ಲ' ಎ೦ದ ಚುಟುಕಾಗಿ.

'ಸುಮ್ಮನೆ ಯಾಕಪ್ಪ ಹಣ ಖರ್ಚು ಮಾಡ್ತೀಯಾ? ಅದೇ ಹಣ ನಿನ್ನ ಹೆಂಡತಿ ಮಕ್ಕಳಿಗಾಗಿ ಇಟ್ಕೋಬಾರ್ದೆ?
( ಮೊನ್ನೆ ಜೆಲ್ಲಿಫಿಶ್ ಎ೦ಬ ಇಸ್ರೇಲಿ ಸಿನಿಮಾ ನೋಡಿದೆ. ಅದರಲ್ಲಿನ ಒಂದು ಸೀನ್ ಇದು . )